ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಸಾದ ತಯಾರಿಸುವ ವಿಶೇಷ ಯಂತ್ರವೊಂದನ್ನು ಅಳವಡಿಸಲಾಗಿದೆ.ಪ್ರಸಾದಕ್ಕೆ ಸಂಬಂಧಪಟ್ಟ ಹರಳು ಕಲ್ಲುಸಕ್ಕರೆ ದವಸ ಧಾನ್ಯಗಳನ್ನು ಹಾಕಿದಾಗ ಮಿಶ್ರಣ ರೂಪದ ಪ್ರಸಾದವು ಪ್ಲಾಸ್ಟಿಕ್ ಲಕೋಟೆಯಲ್ಲಿ ಪ್ಯಾಕ್ ಮಾಡಲಾದ ಸ್ಥಿತಿಯಲ್ಲಿ ಲಭ್ಯವಾಗಲಿದೆ. ಈ ಯಂತ್ರವು ಸಾದಾರಣ ಅಲ್ಲರ್ ರೂಪದಲ್ಲಿ ವಿನ್ಯಾಸಗೊಂಡಿದೆ.
ಈ ಯಂತ್ರವು 1 ಗಂಟೆಗೆ 30ಗ್ರಾಂ, 60ಗ್ರಾಂ ಪ್ರಸಾದವನ್ನು 2000 ಪ್ಯಾಕೆಟ್ ತಯಾರು ಮಾಡುವ ಸಾಮಥ್ರ್ಯ ಹೊಂದಿದೆ. ಇನ್ನು ಮುಂದಕ್ಕೆ ಪೊಳಲಿಯಲ್ಲಿ ಮಾನವ ಶ್ರಮದ ಪ್ರಸಾದ ತಯಾರಿ ಸ್ಥಗಿತಗೊಂಡು ಯಂತ್ರದ ಮೂಲಕ ಪ್ರಸಾದ ತಯಾರಾಗಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

