ಕೈಕಂಬ: ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರೀ ಪ್ರತಿಷ್ಠಾ ಅಷ್ಠಬಂಧ ನೂತನ ಧ್ವಜಪ್ರತಿಷ್ಠಾ ದಿನವಾದ ಇಂದು ಪೊಳಲಿಗೆ ಅಕ್ಷರಸ ಜನಸಾಗರದಂತೆ ಹತ್ತಾರು ಊರುಗಳಿಂದ ಪೋಳಲಿಯತ್ತ ಬಂದ ಭಕ್ತರು ಮೃಣಯ ಮಂಗಳ ಮಂಗಳಮೂರ್ತಿಯನ್ನು ಕಣ್ಣತುಂಬಾ ಕಂಡು ಭಾವಪುಳಕಿತರಾಗಿ ಧನ್ಯರಾದರು.
ದೇವರಿಗೆ ಭಕತರಿಂದ ಅರ್ಪಿಸಲ್ಪಟ್ಟ ಬಣ್ಣ ಬಣ್ಣದ ಸೀರೆಗಳು, ಅಡಿಕೆಗೊನೆ, ಬಾಳೆಗೊನೆ, ಹಿಂಗಾರ ವಿವಿಧ ಹೂವುಗಳಿಂದ ಶೋಭಾಯಾಮಾನವಾಗಿ ಅಲಂಕೃತಗೊಂಡ ಶಿಲ್ಪಕಲೆಯಿಂದ ಮೆರೆಯುತ್ತಿರುವ ಭವ್ಯ ದೇಗುಳವನ್ನು ಕಂಡು ಪುನೀತರಾದರು.
ಅಚ್ಚುಕಟ್ಟಾದ ವ್ಯವಸ್ಥೆ ರುಚಿಕಟ್ಟಾದ ಉಪಹಾರ ಅನ್ನಸಂತರ್ಪಣೆಯ ಅನ್ನಪೂರ್ಣೇಯ ಪ್ರಸಾದವನ್ನು ಲಕ್ಷಾಂತರ ಮಂದಿ ಸ್ವೀಕರಿಸಿದರು. ಸಾಂಸ್ಕøತಿಕ ಕಾರ್ಯಕ್ರಮಗಳು ರಾಜರಾಜೇಶ್ವರೀ ವೇದಿಕೆಯಲ್ಲಿ ಬೆಳಗ್ಗೆ 11.30ರಿಂದ ಪ್ರಾರಂಭವಾದ ವಿವಿಧ ಸಂಗೀತಾ ನೃತ್ಯ ಹಾಸ್ಯಯಕ್ಷಗಾನ ವೈಭವ ಹರಿಕಥೆ ತಾಳಮದ್ದಳೆ, ಜಾಣಪದ ನೃತ್ಯ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದ ಲಕ್ಷಾಂತರ ಮಂದಿಯ ಮನಸೂರೆಗೊಂಡವು.
ಜಗನ್ಮಾತೆಯ ಪುಣ್ಯಸ್ಥಳದಲ್ಲಿ ಅನ್ನಪ್ರಸಾದದ ಮೂಲಕ ಹೊಟ್ಟೆಯ ಹಸಿವನ್ನು ತನಿಸಿಕೊಂಡ ಭಕ್ತರು ಜಗನ್ಮಾತೆಯ ದರ್ಶಣದಿಂದ ಪುನೀತರಾಗಿ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಮನಸ್ಸನ್ನು ತಂಪಾಗಿಸಿಕೊಂಡು ಸಾರ್ಥಕ್ಯ ಭವದಿಂದ ಹಿತಿರುಗುತ್ತಿದ್ದ ದೃಶ್ಯ ಕಂಡು ಬಂತು
