ಬೆಂಗಳೂರು: ಡಾ.ಶರಣ್ ಪಾಟೀಲ್ ಅವರ ನೇತೃತ್ವದ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಜೈಪುರದ ಮಣಿಪಾಲ್ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ನಡೆದ ವಾರ್ಷಿಕ ಪಿಆರ್‍ಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎರಡು ಪ್ರಶಸ್ತಿಗಳಿಗೆ ಭಾಜನವಾಗಿದೆ.

ಪಿಆರ್‍ಸಿಐ ಪಿಆರ್ ಏಜೆನ್ಸಿಗಳು, ಪಿಆರ್ ವೃತ್ತಿಪರರು ಮತ್ತು ಕಾಪೆರ್ರೇಟ್ ತಂಡಗಳಿಗೆ ಹಲವು ಪುರಸ್ಕಾರಗಳನ್ನ ನೀಡಿದ್ದು ಸ್ಪರ್ಶ್ ಆಸ್ಪತ್ರೆಗಳು `ಕಾಪೆರ್Çರೇಟ್ ಈವೆಂಟ್ಸ್’ನಲ್ಲಿ ಗೋಲ್ಡ್ ಮತ್ತು `ಸೋಷಿಯಲ್ ಮೀಡಿಯಾ ಕ್ಯಾಂಪೇನ್’ನಲ್ಲಿ ಕ್ರಿಸ್ಟಲ್ ಪುರಸ್ಕಾರ ಪಡೆದಿದೆ. ಸ್ಪರ್ಶ್ ಯಶಸ್ವಿಯಾಗಿ ನಿವೃತ್ತ ಶಿಕ್ಷಕರಿಗೆ ಯಶಸ್ವಿಯಾಗಿ `ಗುರು ನಮನ’ ಮತ್ತು ಅಂಗದಾನ ನೀಡಿ ಜೀವಗಳನ್ನು ಉಳಿಸಲು ಜಾಗೃತಿ ಮೂಡಿಸುವ `ರೈಡ್ ಫಾರ್ ಕಾಸ್’ ಅಭಿಯಾನಗಳಿಗೆ ಈ ಪುರಸ್ಕಾರ ನೀಡಲಾಗಿದೆ. ಸ್ಪರ್ಶ್ ಶ್ರೀಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ತನ್ನ ಸಿಎಸ್‍ಆರ್ ಚಟುವಟಿಕೆಗಳು ಮತ್ತಿತರೆ ಸೇವಾ ಉಪಕ್ರಮಗಳನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ತೀರ್ಪುಗಾರರು `ಕ್ಯಾನ್ಸರ್ ಗೆದ್ದವರು ಆಸ್ಪತ್ರೆ ರೋಗಿಗಳಿಗೆ ಭೋಜನ ಸಿದ್ಧಪಡಿಸುತ್ತಿರುವ’ ವಿಡಿಯೋ ಆಧರಿಸಿ ಈ ತೀರ್ಮಾನ ಕೈಗೊಂಡಿದ್ದು ಇದು ವಿನೂತನ ಪರಿಕಲ್ಪನೆಯಾಗಿದ್ದು ಕ್ಯಾನ್ಸರ್ ಗೆದ್ದವರು ಮತ್ತು ಸಾಮಾನ್ಯರಲ್ಲಿ ವಿಶ್ವಾಸ ತುಂಬುತ್ತದೆ.
ಈ ಪ್ರಶಸ್ತಿಗಳನ್ನು ಸ್ಪರ್ಶ್ ಆಸ್ಪತ್ರೆಗಳ ಸಮೂಹದ ಸಿಎಂಒ ಗುರುಪ್ರಸಾದ್ ಸ್ವೀಕರಿಸಿದರು. ಈ ಕುರಿತು ಅವರು, “ನಮ್ಮ ಕಾರ್ಯವನ್ನು ಮಾನ್ಯತೆ ಮಾಡಿರುವುದನ್ನು ಬಿಂಬಿಸಿದ ಈ ಪ್ರಶಸ್ತಿ ಸ್ವೀಕರಿಸುವುದು ನಿಜಕ್ಕೂ ದೊಡ್ಡ ಗೌರವ” ಎಂದರು.
ಡಾ.ಶರಣ್ ಪಾಟೀಲ್, “ಪ್ರಶಸ್ತಿಗಳು ನಮ್ಮ ತಂಡಕ್ಕೆ ಉತ್ತಮ ಸಾಧನೆ ತೋರಲು ಉತ್ತೇಜಿಸುತ್ತವೆ ಮತ್ತು ಉತ್ತಮ ಜೀವನ ಹಾಗೂ ಆರೋಗ್ಯಕರ ನಾಗರಿಕರಿಗಾಗಿ ಕೆಲಸ ಮಾಡಲು ನಮ್ಮ ಇಚ್ಛಾಶಕ್ತಿಯನ್ನು ಸದೃಢಗೊಳಿಸುತ್ತವೆ. ಈ ಮಾನ್ಯತೆಗೆ ಪಿಆರ್‍ಸಿಐಗೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಜನರಿಗೆ ಗುಣಮಟ್ಟದ ಆರೋಗ್ಯಸೇವೆಯನ್ನು ನೀಡುವುದನ್ನು ಮುಂದುವರೆಸುತ್ತೇವೆ” ಎಂದರು.

ಸ್ಪರ್ಶ್‍ನಲ್ಲಿ ನಾವು ಸಾಮಾಜಿಕ ಪ್ರಸ್ತುತತೆಯೊಂದಿಗೆ ಚಿಕಿತ್ಸೆಯ ಶ್ರೇಷ್ಠತೆಗೆ ಬದ್ಧರಾಗಿದ್ದೇವೆ. ವ್ಯತ್ಯಾಸ ಉಂಟು ಮಾಡುವುದು ಮತ್ತು ಸಮಾಜದಲ್ಲಿ ದೊಡ್ಡ ಪರಿಣಾಮ ಉಂಟು ಮಾಡುವುದು ನಮಗೆ ಮೂಲಭೂತ ಅಂಶವಾಗಿದೆ. ಗುಣಮಟ್ಟದ ಆರೋಗ್ಯಸೇವೆ ಬಡಜನರಿಗೂ ಲಭ್ಯವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗದೆ. ಸ್ಪರ್ಶ್‍ನಲ್ಲಿ ನಾವು ಹೆಮ್ಮೆಪಡಲು ಹಲವು ಕಾರಣಗಳಿವೆ. 12 ವರ್ಷಗಳ ಅಲ್ಪಕಾಲದಲ್ಲಿ ನಾವು ಅಪಾರ ಸಾಧನೆ ಮಾಡಿದ್ದೇವೆ. ಇಂದು ಯಶವಂತಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಂತೆ ಶ್ರೇಷ್ಠತೆಯನ್ನು ಯಶಸ್ವಿಯಾಗಿ ನೀಡುತ್ತಿದ್ದೇವೆ. ಸ್ಪರ್ಶ್ 1000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಬೆಳೆದಿದ್ದು ಸಮಾಜದ ಎಲ್ಲ ವರ್ಗಗಳ ಜನರಿಗೂ ಅತ್ಯುತ್ತಮ ಆರೈಕೆ ಒದಗಿಸುತ್ತಿದೆ.

By suddi9

Leave a Reply

Your email address will not be published. Required fields are marked *