ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ ಮಾ.13ರ ತನಕ ಬ್ರಹ್ಮಕಲಶೋತ್ಸವ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವುದರಿಂದ ಈ ಬಗ್ಗೆ ವ್ಯಾಪಕ ಪ್ರಚಾರ ಕೊಡಲೆಂದು ಪೊಳಲಿ ಪ್ರಚಾರ ಸಮಿತಿಯಿಂದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಉದಯವಾಣಿ, ವಿಜಯಕರ್ನಾಟಕ, ಹೊಸದಿಗಂತ, ವಿಜಯವಾಣಿ ಸೇರಿ ಹಲವು ಮುದ್ರಣ ಮಾಧ್ಯಮಗಳು, ಸುದ್ದಿ9 ಡಾಟ್ ಕಾಮ್ ಸೇರಿ ನಾನಾ ವೆಬ್‍ಸೈಟ್‍ಗಳು, ಟಿವಿ ಮಾಧ್ಯಮಗಳ ಪ್ರತಿನಿಧಿಗಳು, ಜಾಹೀರಾತುದಾರರು, ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ಪೊಳಲಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪುಣ್ಯವಶಾತ್ ಈ ಬಾರಿ ಬ್ರಹ್ಮಕಶೋತ್ಸವದ ಸೌಭಾಗ್ಯ ಇಲ್ಲಿನ ಸಾವಿರ ಸೀಮೆಯ ಜನತೆಗೆ ಲಭಿಸಿದೆ. ಈ ಪುಣ್ಯ ಕಾರ್ಯದಲ್ಲಿ ಸಾವಿರ ಸೀಮೆಯ ಭಕ್ತರಷ್ಟೇ ಅಲ್ಲದೆ ದೇಶವಿದೇಶಗಳಲ್ಲೂ ಸಾಕಷ್ಟು ಮಂದಿ ಭಕ್ತರಿದ್ದಾರೆ. ಬ್ರಹ್ಮಕಲಶದ ಸೌಭಾಗ್ಯ ಪ್ರತಿಯೊಬ್ಬರಿಗೂ ಲಭಿಸಿ ಪೊಳಲಿ ಮಾತೆಯ ಕೃಪೆಗೆ ಪಾತ್ರವಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿ ನಡೆಯುವ ಪ್ರತಿಯೊಂದ ಕಾರ್ಯಗಳಿಗೂ ವಿಶೇಷ ಪ್ರಸಿದ್ಧಿ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪೊಳಲಿ ಈ ದೇಶದ ಅತಿಪುರಾತನ, ದೊಡ್ಡ ದೇವಾಲಯವಾಗಿದ್ದು, ಇಲ್ಲಿನಷ್ಟು ದೊಡ್ಡ ಮೃಣ್ಮಯ ಮೂರ್ತಿ ಬೇರೆಲ್ಲೂ ಇಲ್ಲ. ನಾವೆಲ್ಲಾ ನಿಮಿತ್ತವೆಂಬಂತೆ ಕೆಲಸ ಮಾಡೋಣ ಉಳಿದೆಲ್ಲಾ ಆಕೆಯ ವ್ಯವಧಾನಕ್ಕೆ ಬಿಟ್ಟ ವಿಷಯವಾಗಿದ್ದು, ಪ್ರಚಾರ ನೀಡುವ ನಮ್ಮ ಕರ್ತವ್ಯವನ್ನು ಹೆಮ್ಮೆಯಿಂದ ನಿಭಾಯಿಸೋಣ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಪೊಳಲಿ ದೇವಸ್ಥಾನದ ಆಸುಪಾಸು ಸರ್ವಲಂಕಾರಭೂಷಿತವಾಗಬೇಕು, ಸ್ವಾಗತ ಗೋಪುರ, ಫ್ಲೆಕ್ಸ್, ಬ್ಯಾನರ್‍ಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಇವುಗಳಿಗೆ ಮಾತೆಯ ಸೀರೆಗಳನ್ನು ಬಳಸಲು ಆಡಳಿತ ಸಮಿತಿಯಿಂದ ಒಪ್ಪಿಗೆ ಪಡೆಯಬೇಕು. ಊರ ಸಂಘಸಂಸ್ಥೆಗಳು ಈ ಬಗ್ಗೆ ಜವಾಬ್ದಾರಿ ಪಡೆದುಕೊಂಡು ಬ್ರಹ್ಮಕಲಶೋತ್ಸವವಕ್ಕೆ ಶುಭಕೋರಬಹುದು. ಪ್ರಚಾರ ವಾಹನಗಳನ್ನು ಬಳಸಿ ಅಲ್ಲಲ್ಲಿ ಡಂಗೂರದ ಮಾದರಿಯಲ್ಲಿ ಈ ಕಾರ್ಯಕ್ಕೆ ಪ್ರಚಾರ ನೀಡಬಹುದು. ಅಲ್ಲಲ್ಲಿ ಬ್ಯಾನರ್, ಬಂಟಿಂಗ್ಸ್, ಸ್ಟಿಕ್ಕರ್ ಅಂಟಿಸಿ ವ್ಯಾಪಕ ಪ್ರಚಾರ ನೀಡಬೇಕು. ಈಗಾಗಲೇ ಆಮಂತ್ರಣ ಪತ್ರಿಕೆಗಳು ಬಿಡುಗಡೆಗೊಂಡಿದ್ದು, ಎಲ್ಲ ಸ್ವಯಂಸೇವಕರು ಇವುಗಳನ್ನು ಹಂಚುವ ಮೂಲಕ ಮಾತೆಯ ಕೃಪೆಗೆ ಪಾತ್ರವಾಗಬೇಕು. ವಾಟ್ಸಾಪ್, ಫೇಸ್‍ಬುಕ್‍ನಂಥಾ ಜಾಲತಾಣಗಳನ್ನು ಬಳಸಿ ವ್ಯಾಪಕ ಪ್ರಸಿದ್ಧಿ ನೀಡಬೇಕು ಎಂದು ನಿರ್ಧರಿಸಲಾಯಿತು.

ಪತ್ರಿಕೆಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ದೇವಸ್ಥಾನದ ಕುರಿತ ನಾನಾ ಲೇಖನಮಾಲೆಗಳನ್ನು ಪ್ರಕಟಿಸಬೇಕು. ಪೊಳಲಿಯಲ್ಲಿ ಸುದ್ದಿಮಾಧ್ಯಮಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇಂಟರ್ನೆಟ್, ಕಂಪ್ಯೂಟರ್ ವ್ಯವಸ್ಥೆ ಸೇರಿ ಹಲವು ವ್ಯವಸ್ಥೆ ಮಾಡಲಾಗುತ್ತದೆ ಎಂದು ನಿರ್ಧರಿಸಲಾಯಿತು.

By suddi9

Leave a Reply

Your email address will not be published. Required fields are marked *