ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಠಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.4ರಿಂದ ಮಾ.13ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಅರ್ಚಕರು ಆಮಂತ್ರಣ ಪತ್ರಿಕೆಯನ್ನು ದೇವರ ಚರಣಗಳಲ್ಲಿ ಇಟ್ಟು ಪ್ರಾರ್ಥಿಸಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಬಿಡುಗಡೆಗೊಳಿಸಲಾಯಿತು. ಈ ವೇಳೆ ದೇವಸ್ಥಾನದ ಆಡಳಿತ ಮೊಕ್ತೇಸರರು, ಬ್ರಹ್ಮಕಲಶೋತ್ಸವ ಸಮಿತಿಯವರು, ಕಾರ್ಯನಿರ್ವಹಣಾಧಿಕಾರಿ, ಅರ್ಚಕ ವೃಂದದವರು ಹಾಗೂ ನೂರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

