ಅಡ್ಡೂರು: ಇತಿಹಾಸ ಪ್ರಸದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಜೀರ್ಣೋದ್ಧಾರಗೊಳ್ಳತ್ತಿರುವ ಸುಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿ ಗುಡಿಯ “ದ್ವಾರ ಧ್ವಯಗಳಿಗೆ ರಜತ ಕವಚ” ತೀಯಾ ಸಮಾಜದ ವತಿಯಿಂದ ಸೇವಾ ರೂಪವಾಗಿಅರ್ಪಿಸಲಿರುವ ರೂ.20ಲಕ್ಷಮೌಲ್ಯದರಜತಾ ಕವಚದ ಸಮರ್ಪಣಾ ಸಮಾರಂಭದ ಅಮಂತ್ರಣಪತ್ರಿಕೆಯ ಬಿಡುಗಡೆಯು ಡಿ. 28ರಂದು ಶುಕ್ರವಾರ ಉಳ್ಳಾಲ ಶ್ರೀಚೀರುಂಭಿ ಭಗವತೀದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರು ಪ್ರಾರ್ಥಿಸಿ ಆಮಂತ್ರಣ ಪತ್ರಕೆಯನ್ನು ಶ್ರೀ ಭಗವತೀ ತೀಯಾಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ಇದರ ವತಿಯಿಂದಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ ಉಳ್ಳಾಳ್ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಳ್,ಪ್ರ.ಕಾರ್ಯದರ್ಶಿ ಬಾಬು ಬೆಲ್ಚಾಡ,ಉಪಾಧ್ಯಕ್ಷ ಸುರೇಶ್ ಭಟ್ನಗರ,ಕೋಶಾಧಿಕಾರಿ ಯಶವಂತ ಉಚ್ಚಿಲ್,ಶ್ರೀ ಭಗವತೀ ಸೇವಾಸಮಿತಿ ಅಡ್ಡೂರು ನಂದ್ಯಪೊಳಲಿ ಇದರ ಅಧ್ಯಕ್ಷ ಚಿದಾನಂದ ಗುರಿಕಾರ,ಕಾರ್ಯಾಧ್ಯಕ್ಷ ಉಮೇಶ್ ಸಾಲಿಯಾನ್ ಬೆಂಜನಪದವು,ಉಪಾಧ್ಯಕ್ಷ ರಾಮಚಂದ್ರ ಬಂಗೇರಾ,ಮಾರಿಪಳ್ಳ,ರಾಘವ ಟ್ಯಲರ್ ಕೈಕಂಬ, ಗೋಪಾಲ ಬೆಲ್ಚಾಡ ಬೆಂಜನಪದವು,ಕೋಶಾಧಿಕಾರಿ ಧನಂಜಯ ಕೆ.ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು.ಪ್ರ.ಕಾರ್ಯದರ್ಶಿ ಬಿ.ಜನಾರ್ದನ ಅಮ್ಮುಂಜೆ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.

