ಮೂಡುಬಿದಿರೆ: ತ್ರಿಭುವನ್ ತಿಲಕ ಚೂಡಾಮಣಿ ಬಸದಿಯಲ್ಲಿ (ಸಾವಿರ ಕಂಬದ ಬಸದಿ) ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ಲಕ್ಷದೀಪೋತ್ಸವ ನಡೆಯಿತು.

Savira Kamba Basadi Deepostava (1)
ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಎಂ.ಸುದೇಶ್ ಕುಮಾರ್, ಎ.ದಿನೇಶ್ ಕುಮಾರ್, ಶ್ರೀಜೈನಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ, ಅರಮನೆ ಮೊಕ್ತೇಸರ ಎಂ.ಪದ್ಮಪ್ರಸಾದ್ ಸಹಿತ ಶ್ರಾವಕರು ಭಾಗವಹಿಸಿದರು.

Savira Kamba Basadi Deepostava (2)
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ದಿ.ಶ್ರೀಧರ ಪಾಂಡಿ ವಿರಚಿತ ಜಿನಕಥಾ ಆಧಾರಿತ ಜಿನಪ್ರಸಂಗ ಯಕ್ಷಗಾನ ಗಾನವೈಭವ ನಡೆಯಿತು. ಪ್ರಭಾತ್ ಬಲ್ನಾಡು, ಶಿವಶಂಕರ್ ಬಲಿಪ ಭಾಗವತಿಕೆ, ರವಿರಾಜ್ ಜೈನ್ ಮದ್ದಳೆಯಲ್ಲಿ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *