ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಕಾರ್ಕಳದಿಂದ ಧ್ವಜಸ್ಥಂಭದ ಕೊಳವೆಕಲ್ಲು ಧ್ವಜಸ್ಥಂಭ ಪೀಠ ಆಗಮನ ಪ್ರಯುಕ್ತ ಇಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಪೊಳಲಿ ದೇವಳದ ಅರ್ಚಕ ಪರಮೇಶ್ವರ್ ಭಟ್ ದೇವಳದ ವತಿಯಿಂದ ಪ್ರಾರ್ಥಿಸಿ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಗೌರವ ಅಧ್ಯಕ್ಷ ರಾಮದಾಸ್ ಕೋಟ್ಯಾನ್ ಮಜಿಲಗುತ್ತು, ಪ್ರಧಾನ ಕಾರ್ಯದರ್ಶಿ ಪುರುಷ ಎನ್.ಸಾಲಿಯಾನ್ ನೆತ್ರಕೆರೆ, ಕೋಶಾಧಿಕಾರಿ ಬಳ್ಳಿ ಚಂದ್ರಶೇಖರ ಕೈಕಂಬ, ಉಪಾಧ್ಯಕ್ಷರುಗಳು ಗೋಪಾಲಕೃಷ್ಣ ಕೈಕಂಬ, ಉಮೇಶ ಪೂಜಾರಿ ಬಾರಿಂಜ, ಜಯಾನಂದ ಅಂಚನ್ ಪಲ್ಲಿಪಾಡಿ, ಜೊತೆಕಾರ್ಯದರ್ಶಿಗಳು ನಾರಾಯಣ ಎಂ. ಅಮ್ಮುಂಜೆ, ರಾಜು ಕೋಟ್ಯಾನ್ ಪಲ್ಲಿಪಾಡಿ, ಜೊತೆ ಕೋಶಾಧಿಕಾರಿ ಯಶವಂತ ಕೋಟ್ಯಾನ್ ಪೊಳಲಿ, ಭುವನೇಶ್ ಪಚ್ಚಿನಡ್ಕ , ದೋಗು ಪೂಜಾರಿ ಮಟ್ಟಿ, ಚಂದಪ್ಪ ಅಂಚನ್ ಮಜಿಲಗುತ್ತು, ಸದಾಶಿವ ಕರ್ಕೇರ ಕಾಜಿಲ, ಪ್ರಶಾಂತ್ ವಿಮಲ ಕೋಡಿ,ಮೋಹನ್ ಸಾಲಿಯಾನ್, ಕರುಣಾಕರ, ಗಣೇಶ್ ಪೂಜಾರಿ, ರಾಮಪ್ಪ ಪೂಜಾರಿ, ನಾರಾಯಣ ಪೂಜಾರಿ ಮಳಲಿ, ಕರುಣಾಕರ ಪೊಳಲಿ, ನವೀನ್, ಸಂಜೀವ ಪೂಜಾರಿ ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿ ಸರ್ವಸದಸ್ಯರು ಉಪಸ್ಥಿತರಿದ್ದರು.
