ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು 17-12-2018 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಮಾತಾಡಿ `ವಿದ್ಯಾರ್ಥಿಗಳೆ ನಿಮ್ಮ ನಿಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದರ ಮೇಲೆ ನಂಬಿಕೆ ಇಟ್ಟು ಕೌಶಲ್ಯ ಮತ್ತು ಪ್ರತಿಭೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.’ ಎಂದರು.SHV_3178
ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ಸಂಚಾಲಕ ವಂ| ಫಾ| ಎರಿಕ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕರುಗಳಾದ ವಂ| ಫಾ| ಲ್ಯಾನ್ಸಿ ಸಾಲ್ಡಾನಾ, ಸಿಸ್ಟರ್ ಮರಿನಾ ಮತ್ತು ಸಿಸ್ಟರ್ ಜಾನೆಟ್, ಸಲಹಾ ಸಮಿತಿ ಗೌರವ ಸಲಹೆಗಾರ ಸುದರ್ಶನ ಪಡಿಯಾರ್, ಸದಸ್ಯರು ಮತ್ತು ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದು ಬಹುಮಾನಗಳನ್ನು ವಿತರಿಸಿದರು.
ವಿಜಯಲಕ್ಷ್ಮಿ ಸ್ವಾಗತಿಸಿದರು. ಲೇನಾ ವೇಗಸ್, ಚೈತ್ರಾ, ರೆನಿಟಾ, ನೀತಾ ಮತ್ತು ಕ್ಲಾರಾ ಪ್ರತಿಭಾನ್ವಿತರ ಪಟ್ಟಿ ಓದಿದರು. ಶಾಲೆಟ್ ಮತ್ತು ಸಂಧ್ಯಾ ವಂದಿಸಿದರು. ಸಚಿನ್, ಪೂರ್ಣಿಮಾ ಮತ್ತು ಲವಿಟಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *