ಮೂಡುಬಿದಿರೆ: ಕಾರ್ಕಳ ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ಒಂದು ವಾರದ ಕಾಲ ನಡೆಯಲಿರುವ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಅ.7ರಂದು ಉದ್ಘಾಟನೆಗೊಂಡಿತು.
ಕಾರ್ಕಳವಿಧಾನ ಸಭಾ ಸದಸ್ಯರು ಹಾಗೂ ಕರ್ನಾಟಕಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆದ ಸುನೀಲ್ ಕುಮಾರ್ ರವರು ಶಿಬಿರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಇವರು, ವಿದ್ಯಾರ್ಥಿಗಳು ಶಿಬಿರದ ಮುಖಾಂತರ ಗಾಂಧೀಜಿಯವರು ಮತ್ತು ವಿವೇಕಾನಂದರಿಂದ ಪ್ರತಿಪಾದಿತ ಜೀವನಾದರ್ಷಗಳನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ರಮೇಶ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಮ್.ಡಿ. ಶಾಲೆಯ ಮುಖ್ಯೋಪಾಧ್ಯಾಯರಾದ ಹರ್ಷವರ್ಧನ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ನಿರೂಪಿಸಿ, ಸಂಸ್ಕೃತ ಉಪನ್ಯಾಸಕರಾದ ಅಂಬರೀಷ ಚಿಪಳೂಣಕರ್ ಸ್ವಾಗತಿಸಿದರು ಹಾಗೂ ಓSS ಶಿಬಿರಾಧಿಕಾರಿ ದಾಮೋದರ್ ವಂದಿಸಿದರು.

