ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಶಿಕ್ಷಕರಾದ ವಿಶ್ವನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕ ಜೀವನ ಅತ್ಯಂತ ಪವಿತ್ರ. ಮಕ್ಕಳ ಒಳಿತೇ ಅವರ ಧ್ಯೇಯವಾಗಿದ್ದು ಅವರು ತಮ್ಮ ಸ್ಥಾನವನ್ನು ಅರಿತು ಕರ್ತವ್ಯ ಪಾಲಿಸಬೇಕು ಎಂದರು.

ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಕೆ.ಬಾಲಕೃಷ್ಣ ಆಳ್ವ ಮಾತನಾಡಿ, ಡಾ|| ಸರ್ವಪಳ್ಳಿ ರಾಧಾಕೃಷ್ಣರ ಆದರ್ಶ ಈ ಭೂಮಿಯಲ್ಲಿ ಉಳಿದಿದೆ ಎಂದರೆ ಅವರ ಮೇರು ವ್ಯಕ್ತಿತ್ವವೇ ಅದಕ್ಕೆ ಸಾಕ್ಷಿ , ಶಿಕ್ಷಕರು ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದು ಹೇಳಿದರು.
ಶಾಲಾ ಸಂಚಾಲಕ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ಹೆತ್ತವರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸುವ ಉದ್ದೇಶದ ಸಾರ್ಥಕತೆಗಳಿಸುವಲ್ಲಿ ಸಫಲರಾದಲ್ಲಿ ಅದೇ ಶಿಕ್ಷಕರಿಗೆ ಸಲ್ಲುವ ಗೌರವ ಎಂದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ.ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಶಿಕ್ಷಕರ ದಿನಾಚರಣೆಯ ಮಹತ್ವ ತಿಳಿಸಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಅಪ್ರಾಯ ಪೈ, ಕಾರ್ಯದರ್ಶಿ ಕೆ.ನಾರಾಯಣ ಶೆಟ್ಟಿ , ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ, ಕಾರ್ಯಾಕಾರಿ ಸಮಿತಿಯ ಸದಸ್ಯರು, ಪೋಷಕರು , ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ವಿಜೇತ್ ಕೆ.ಗೌಡ ಸ್ವಾಗತಿಸಿ, ಸುರಕ್ಷಾ ಸಾಲಿಯಾನ್ ವಂದಿಸಿದರು. ವಿಂದ್ಯಾ ಕೈಂತಾಜೆ ಹಾಗೂ ಅಮೃತ.ಕೆ.ಭಟ್ ಕಾರ್ಯಕ್ರಮ ನಿರೂಪಿಸಿದರು.
