ಮೂಡುಬಿದಿರೆ: ಎಕ್ಸಲೆಂಟ್ ಖಾಲೇಜು ಮೂಡಬಿದಿರೆ ಇದರ ಆಡಳಿತ ಮಂಡಳಿಯ ಟ್ರಸ್ಟಿ ಭೋಜರಾಜ ಬುಣ್ಣು (85) ಅವರು ಗುರುವಾರ ನಾರಾವಿಯಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಜನಪರ ಕೃಷಿಕರಾಗಿದ್ದ ಭೋಜರಾಜ ಬುಣ್ಣು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಪುತ್ರ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

