ಮೂಡುಬಿದಿರೆ: ಸ.ಹಿ.ಪ್ರಾ.ಶಾಲೆ ಮುಳಿಬೆಟ್ಟು, ಇರುವೈಲು ಶಾಲೆಗೆ ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ನವೀಕೃತ ಕೊಠಡಿ ನಿರ್ಮಿಸಲು ಮಂಜೂರಾದ ಹಣದಿಂದ ನಿರ್ಮಿಸಲಾದ ಕೊಠಡಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ರವಿವಾರ ಉದ್ಘಾಟಿಸಿದರು.

mulibettu school
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಸರಕಾರ ಉಚಿತ ಕೊಡ ಮಾಡಿದ ಶೂ-ಸಾಕ್ಸ್‍ಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಸದಸ್ಯರಾದ ವಲೇರಿಯನ್ ಕುಟಿನ್ಹ, ಶಿವಪ್ಪ ಸಾಲ್ಯಾನ್, ಕುಸುಮ, ವಿದ್ಯಾಭಿಮಾನಿಗಳಾದ ರಂಜಿತ್ ಕುಮಾರ್ ತೋಡಾರು, ಎಂ.ವಿ.ಶೆಟ್ಟಿ ಮುಳಿಬೆಟ್ಟು, ಪದ್ಮನಾಭ ಮುಳಿಬೆಟ್ಟು ಉಪಸ್ಥಿತರಿದ್ದರು.
ಸಹಶಿಕ್ಷಕಿಯರಾದ ಗೀತಾ ಸ್ವಾಗತಿಸಿ, ಸುನೀತಾ ಕಾರ್ಯಕ್ರಮ ನಿರೂಪಿಸಿ, ಗೌರವ ಶಿಕ್ಷಕಿ ಸುರಕ್ಷಿತಾ ವಂದಿಸಿದರು.

By suddi9

Leave a Reply

Your email address will not be published. Required fields are marked *