ಜ್ಯೋತಿಗುಡ್ಡೆ : ಶ್ರಾವಣ ಸಂಕ್ರಮಣದ ಪ್ರಯುಕ್ತ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಸ್ಯ ನಾರಾಯಣ ಕಾರ್ಯಕ್ರಮ ನಡೆಯಿತು.

sasya narayana (3)
ಪ್ರಕೃತಿ ಒಲಿದರೆ ಏನಾಗುತ್ತದೆ ಮುನಿದರೆ ಏನಾಗುತ್ತದೆ ಎನ್ನುವುದನ್ನು ಕಥೆಯಾಗಿ ಕೇಳಿದ್ದೆವು. ಆದರೆ ಇಂದು ಅದು ನಮ್ಮೆದುರಿಗೆ ಜ್ವಲಂತವಾಗಿ ನೋಡಲು ಸಿಗುತ್ತಿದೆ. ಸರಾಗವಾಗಿ ಹಾದು ಹೋಗಬೇಕಾದ ಜಾಗದಲ್ಲಿ ಫ್ಲಾಟ್‍ಗಳನ್ನು ಕಟ್ಟಿದ್ದೇವೆ. ಪ್ರಕೃತಿ ಆರಾಧನೆ ಸಂಸ್ಕøತಿಯ ಮೂಲ ನಂಬಿಕೆಯನ್ನು ಮರೆತು ಒಂದು ಮರವಿರುವ ಕಟ್ಟೆಯ ಜಾಗವನ್ನು ಬನ ಎಂದು ಕರೆಯತೊಡಗಿದ್ದೇವೆ. ಕಲ್ಲು ಮರ ಪ್ರಾಣಿ ಪಕ್ಷಿಗಳಲ್ಲಿ ಭಗವತ್ ಸ್ವರೂಪ ಕಾಣುತ್ತಿದ್ದ ನಾವು ಹಣದ ಹಿಂದೆ ಬಿದ್ದು ನಿರ್ನಾಮಗೊಳಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಸ್ಯವನ್ನು ಆರಾಧನೆಯ ಭಾಗವಾಗಿಸಿ ಸಸ್ಯ ನಾರಾಯಣ ಎನ್ನುವ ವಿಶೇಷ ಹೆಸರಿನಡಿ ಕಾರ್ಯಕ್ರಮ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದು ಗ್ರಾಮವಿಕಾಸ ಸಂಚಾಲಕರಾದ ಸಂತೋಷ್ ನೆತ್ತರಕೆರೆ ಇವರು ಸಸಿಗಳನ್ನು ವಿತರಿಸಿ ಅಭಿಪ್ರಾಯ ಪಟ್ಟರು.

sasya narayana (7)
ಕ್ಲೋಥ್ ಬ್ಯಾಂಕ್ ಸಂಸ್ಥಾಪಕ ರೇಮಂಡ್ ಡಿ ಕುನ್ಹಾ ಮಾತಣಾಡಿ, ನೆಮ್ಮದಿಯ ಬದುಕೆಂದರೆ ಅತಿ ಮೂಲ ಸೌಕರ್ಯವಾದ ಊಟ ಬಟ್ಟೆ ಸೂರು ದೊರೆಯುವುದು. ಅದರ ಅವಶ್ಯಕತೆ ಮಂಗಳೂರಿಗೆ ಕೂಡ ಇದೆ ಎನ್ನುವ ನಿಟ್ಟಿನಲ್ಲಿ ಸ್ಥಾಪಿಸಲಾದ ಕ್ಲೋಥ್ ಬ್ಯಾಂಕ್‍ನಿಂದಾಗಿ ಇಂದು ಜ್ಯೋತಿಗುಡ್ಡೆ ಪರಿಸರದ ಮಕ್ಕಳಿಗೂ ಉಚಿತ ವಸ್ತ್ರ ದೊರೆಯುವಂತಾಯಿತು ಎಂದು ಅಭಿಪ್ರಾಯ ಪಟ್ಟರು.

sasya narayana (4)
ಸರಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರೂ ಜನರ ಮನಃಪೂರ್ವಕ ಭಾಗಿದಾರಿಕೆ ಇಲ್ಲವಾದರೆ ಸಫಲತೆ ಕಾಣಲು ಅಸಾಧ್ಯ. ಜ್ಯೋತಿಗುಡ್ಡೆ ಕಳೆದ 3 ವರ್ಷಗಳಿಂದ ಪರಿಸರ ಪೂರಕ ಕಾರ್ಯಕ್ರಮ ನೆರವೇರಿಸುತ್ತ ಅಭಿನಂದನಾರ್ಹ ಕೆಲಸ ಮಾಡುತ್ತಿದೆ ಎಂದು ವಲಯ ಅರಣ್ಯಾಧಿಕಾರಿಯಾದ ಬಿ ಸುರೇಶ್ ಮಾತಾಡಿದರು.

sasya narayana (2)
ಈ ಸಂದರ್ಭದಲ್ಲಿ ಕೆಆರ್‍ಡಬ್ಲ್ಯುಸಿಡಿಎಸ್ ಮಂಗಳೂರಿನ ಸಂಯೋಜಕಿ ಸುಜಾತ ಹಾಗೂ ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.

sasya narayana (9)
ಸೇವಾ ಸಮಿತಿಯ ಅಧ್ಯಕ್ಷರಾದ ಉದಯ ಕುಮಾರ್ ಜ್ಯೋತಿಗುಡ್ಡೆ ಸ್ವಾಗತಿಸಿ. ಉಮೇಶ್ ರೆಂಜೋಡಿಯವರು ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯ ಸುರೇಶ್ ವಂದಿಸಿದರು.

By suddi9

Leave a Reply

Your email address will not be published. Required fields are marked *