ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 6 ಶನಿವಾರದಂದು ಬೆಳಗ್ಗೆ ಗಂಟೆ 10ರಿಂದ ಸಂಜೆ 5 ಗಂಟೆವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಕನರ್ಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.
ಹಾಲಿ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್, ಕನರ್ಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದಶರ್ಿಯಾಗಿದ್ದ ಮದನ್ ಗೋಪಾಲ್, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್, ನಿದರ್ೆಶಕರಾದ ಡಾ.ಧನ್ಯ ಕುಮಾರ್, ವೈದ್ಯಕೀಯ ಸಹ ನಿದರ್ೆಶಕರಾದ ಡಾ.ಕೆ.ಬಿ.ಈಶ್ವರಪ್ಪ ಸಹಿತ ರಾಜ್ಯ ಮಟ್ಟದ ಇತರ ಉನ್ನತ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ಜಿಲ್ಲಾ ಸರ್ಜನ್ಗಳ ಸಹಿತ ಅನೇಕ ಮಂದಿ ಅಧಿಕಾರಿಗಳ ಪಾತ್ರವನ್ನು ಈ ಬಹುಕೋಟಿ ಹಗರಣದಲ್ಲಿ ತನಿಖೆಗೆ ಒಳಪಡಿಸುವ ಅಗತ್ಯ ಇರುವುದರಿಂದ ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಶ್ರೀರಾಮ ದಿವಾಣ ತಿಳಿಸಿದ್ದಾರೆ.
ರಾಜ್ಯಮಟ್ಟದ ಬಹುಕೋಟಿ ಹಗರಣದ ಬಗ್ಗೆ ಮೊತ್ತಮೊದಲು ಅಧಿಕಾರಿಗಳ (ಸರಕಾರದ) ಗಮನಕ್ಕೆ ತಂದ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರನ್ನು ಸುಳ್ಳು ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆಯೇ ಅಮಾನತು ಮಾಡಿದ್ದು, ಅಮಾನತುಗೊಳಿಸಿ ವರ್ಷವಾಗುತ್ತಾ ಬಂದರೂ ಮತ್ತೆ ನೇಮಕ ಮಾಡದಿರುವುದು, ಕೆಲವೊಂದು ನಿಧರ್ಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ನಿಧರ್ಿಷ್ಟ ಖಾಸಗಿ ವ್ಯಕ್ತಿಗಳು ನಿರಂತರವಾಗಿ ಅವರಿಗೆ ಮತ್ತು ಬಹುಕೋಟಿ ಹಗರಣದ ಮಹಿಳಾ ಸಾಕ್ಷಿದಾರರಿಗೆ ಕಿರುಕುಳ ನೀಡುತ್ತಿರುವುದು ಇತ್ಯಾದಿ ನಡೆಯುತ್ತಿದೆ ಎಂದು ಶ್ರೀರಾಮ ದಿವಾಣ ದೂರಿದ್ದಾರೆ.
ನೊಂದವರಿಗೆ ಸಲ್ಲಬೇಕಾದ ಸಹಜ ನ್ಯಾಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ತಪ್ಪೆಸಗಿದವರಿಗೆ ಶಿಕ್ಷೆ ನೀಡುವುದು ಬಿಟ್ಟು ರಕ್ಷಣೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸೆಪ್ಟೆಂಬರ್ 6ರಂದು ಸತ್ಯಾಗ್ರಹ ನಡೆಸುತ್ತಿದ್ದು, ನ್ಯಾಯ ಲಭಿಸದಿದ್ದಲ್ಲಿ ಹೋರಾಟವನ್ನು ಹಂತಹಂತವಾಗಿ ರಾಜ್ಯದ ಮತ್ತು ದೇಶದ ರಾಜಧಾನಿವರೆಗೂ ವಿಸ್ತರಿಸಲಾಗುವುದು. ನ್ಯಾಯಪರರು, ಭ್ರಷ್ಟಚಾರ ವಿರೋಧಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗುವ ಮೂಲಕ ಸಹಕರಿಸಬಹುದು ಎಂದು ಶ್ರೀರಾಮ ದಿವಾಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

