ಮಂಗಳೂರು: ಕಳಸ ಬಳಿಯ ಅಂಭತೀರ್ಥದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲಾಗಿದ್ದಾನೆ.

ನೀರು ಪಾಲಾದ ಯುವಕ ಮೂಲತಃ ಮಂಗಳೂರಿನ ತುಂಬೆ ಬಳಿಯ ಇಂಜಿನಿಯರ್ ಕಿರಣ್ಕೋಟ್ಯಾನ್ ನೀರಿನಲ್ಲಿ ಮುಳುಗಿದ್ದಾನೆ. 15 ದಿನದ ಬಳಿಕ ಭದ್ರಾ ನದಿಯಲ್ಲಿ ಮುಳುಗಿರುವ ಶವ ಆ.9 ಗುರುವಾರದಂದು ನೀರಿನಲ್ಲಿ ತೇಲಿಹೋಗುತ್ತಿರುವಾಗ ಹಳ್ಳುವಳ್ಳಿ, ಭಾಳೆಹೋಳೆ ಕಗ್ಗನಳ್ಳ ಬಳಿ ಶವ ಪತ್ತೆಯಾಗಿದೆ.
ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಂಬುತೀರ್ಥಕ್ಕೆ ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ಸಂಭವಿಸಿದೆ.

