ಬೆಂಗಳೂರು: ಈಗಿನ ರಾಜ್ಯ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳಿದ್ದು, ಹೆಚ್.ಡಿ ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ ರೇವಣ್ಣ ಸೂಪರ್ ಸಿಎಂ, ಹೆಚ್.ಡಿ ದೇವೇಗೌಡ ಸುಪ್ರೀಂ ಸಿಎಂ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ರಾಜ್ಯದಲ್ಲಿ ಇಷ್ಟು ಮುಖ್ಯಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ ಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲು ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಆಡಳಿತದ ವಿರುದ್ಧ ಟೀಕಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಬಿಜೆಪಿ ವಿವೇಚನೆಯಿಂದ ಮಾತನಾಡಬೇಕು ಎಂದು ಬಿಜೆಪಿ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದೆ.
