ಮಂಗಳೂರು: 2019ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಎಲ್ಲ ರೀತಿ ಪ್ರಯತ್ನ ಮಾಡುತ್ತಿದೆ. ಅಲ್ಲದೇ ಬಿಜೆಪಿಗೆ ದಕ್ಷಿಣ ಕನ್ನಡ ಜಿಲ್ಲೆ ಉಳಿಸುವುದು ಪ್ರತಿಷ್ಠೆಯಾಗಿದೆ. ಅನೇಕ ಅಪಪ್ರಚಾರಕ್ಕೆ ಒಳಗಾಗಿರುವ ಹಾಲೀ ಸಂಸದ ನಳಿನ್ ಕುಮಾರ್ ಕಟೀಲ್ ಹಿತಾಸಕ್ತಿಗಳ ಮುಂದೆ ಅಸಂಖ್ಯಾತ ಕಾರ್ಯಕರ್ತ ಪಡೆ ಹಾಗೂ ದಕ್ಷಿಣ ಕನ್ನಡ ಬಿಜೆಪಿಯ ಘಟಾನುಘಟಿ ನಾಯಕರುಗಳು ಸಜ್ಜಾಗಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಎರಡೂ ಅವಧಿಗಳಲ್ಲಿ ಕೇಂದ್ರದ ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇವರು ದೇಶದ ಪ್ರಧಾನಿ ಮೋದಿಜೀ ಹಾಗೂ ಅಮಿತ್ ಶಾ ಅವರಿಂದಲೇ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇವರ ಕೆಲಸದ ಪ್ರಾಮಾಣಿಕತೆ, ದಕ್ಷತೆ, ಕರ್ತವ್ಯನಿಷ್ಠೆ ಹಾಗು ಯಶಸ್ಸನ್ನು ಗುರುತಿಸಿರುವ ಸಂಘದ ಹಾಗೂ ಪಕ್ಷದ ಹಿರಿಯರು, ನಳಿನ್ ಕುಮಾರ್ ಕಟೀಲ್ ಅವರೇ ಸಂಸದ ಸ್ಥಾನಕ್ಕೆ ಸಮರ್ಥ ವ್ಯಕ್ತಿ ಎಂದು ತೀರ್ಮಾನಿಸಿದ್ದಾರೆ ಹಾಗೂ ನಳಿನ್ ಕುಮಾರ್ ಅವರ ಹೆಸರೇ ಖಚಿತಗೊಂಡಂತಾಗಿದೆ. ಇದು ಜಿಲ್ಲೆಯ ಅಸಂಖ್ಯಾತ ಕಾರ್ಯಕರ್ತರಲ್ಲಿ ಮತ್ತೇ ಸಂಸದ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಆಯ್ದೆಯಾಗುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

