ಶ್ರೀನಿವಾಸಪುರ: ವಿಶ್ವಪರಿಸರ ದಿನಾಚರಣೆ ಆಚರಿಸುವ ಮೂಲಕ ಪುರಸಭೆಯಿಂದ ಪಟ್ಟಣದ ಪದವಿ ಹಾಸ್ಟಲ್ ಹಾಗೂ ಪಿಯುಸಿ ಹಾಸ್ಟಲ್ಗಳ ಆವರಣದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸಸಿ ನೆಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಶ್ರೀನಿವಾಸಪುರ ಪುರಸಭೆ ಕಾರ್ಯಾಲಯ, ತಾಲೂಕು ಕಚೇರಿ, ತಾಲೂಕು ಪಂಚಾಯತ್ ಕಾರ್ಯಾಲಯ, ವಲಯ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಿಗ್ರಿ ಹಾಸ್ಟಲ್ ಹಾಗು ಪಿಯುಸಿ ಹಾಸ್ಟಲ್ಗಳ ಆವರಣದಲ್ಲಿ ವಿವಿಧ ತಳಿಗಳ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಪರಿಸರದ ಮಹತ್ವ, ಆರೋಗ್ಯ ಕುರಿತಂತೆ ಜಾಗೃತಿ ಮೂಡಿಸಿ ಪ್ರತೀ ಕುಟುಂಬದ ವ್ಯಕ್ತಿ ತಲಾ ಒಂದು ಸಸಿ ನೆಡುವ ಮೂಲಕ ಪರಿಸರ ಕಾಪಾಡಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್.ಎನ್.ಪ್ರಶಾಂತ್, ತಾಲೂಕು ಪಂಚಾಯತ್ ಇಒ, ವಿ.ನಾರಾಯಣಸ್ವಾಮಿ, ವಲಯ ಅರಣ್ಯಾಧಿಕಾರಿ ಎನ್. ರಾಮಕೃಷ್ಣ, ಸ.ನೌ.ಸಂಘದ ಅಧ್ಯಕ್ಷ ಎಂ.ನಾಗರಾಜ್, ಪುರಸಭಾ ಮುಖ್ಯಾಧಿಕಾರಿ ವಿ.ಸತ್ಯನಾರಾಯಣ, ಇಂಜನಿಯರ್ ಶ್ರೀನಿವಾಸ್, ಪುರಸಭಾ ಸದಸ್ಯ ಶಂಕರ್, ಡಾ.ವೆಂಕಟೇಶರೆಡ್ಡಿ, ಸತ್ಯನಾರಾಯಣ, ಸಿಬ್ಬಂದಿಗಳಾದ ಚಂದ್ರಣ್ಣ, ನಾಗೇಶ್, ಕೆ.ಸಿ.ಶ್ರೀನಿವಾಸ್ ಮತ್ತಿತರರಿದ್ದರು.

