ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10ನೇ ತರಗತಿಯ ವಿಜೇತ್.ಕೆ.ಎಂ ನಾಯಕನಾಗಿ ಹಾಗೂ 9 ನೇ ತರಗತಿಯ ದೀಪಾಲಿ ಎಂ.ಎಸ್. ಉಪನಾಯಕಿಯಾಗಿ ಬಹುಮತದಿಂದ ಆಯ್ಕೆಗೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಾಯೋಗಿಕ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಿಕೊಂಡು ವಿದ್ಯಾರ್ಥಿ ನಾಯಕರ ಆಯ್ಕೆಗೆ ಚುನಾವಣೆ ನಡೆಸಲಾಯಿತು.
ಮತಯಂತ್ರದ ಬಳಕೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡಿಕೆ, ಚುನಾವಣಾ ಅಧಿಕಾರಿಗಳ ವಿಶೇಷ ನಿಗಾ ವ್ಯವಸ್ಥೆ, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಮತದಾರರಿಂದ ಮತದಾನ, ಮತಎಣಿಕೆ, ವಿಜೇತ ಅಭ್ಯರ್ಥಿಗಳ ಘೋಷಣೆ, ಹೀಗೆ ಎಲ್ಲವೂ ಶಿಸ್ತುಬದ್ಧವಾಗಿ ನಡೆಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ಸಿ.ಶ್ರೀಧರ್, ಚುನಾವಣಾ ಅಧಿಕಾರಿಗಳಾಗಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಹಾಗೂ ಗ್ರೇಸ್.ಪಿ.ಸಲ್ಡಾನಾ ಕಾರ್ಯ ನಿರ್ವಹಿಸಿದರು.
ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಯಜ್ಞೇಶ್ವರಿ ಎಸ್.ಶೆಟ್ಟಿ, ಮಂಜುಳಾ ಎಚ್.ಗೌಡ, ಶುಭಾ ಕೆ , ರಶ್ಮಿ ಫೆರ್ನಾಂಡಿಸ್, ಲೀಲಾ , ಆಶಾಲತಾ ಹಾಗೂ ಹರಿಣಾಕ್ಷಿ ಕಾರ್ಯ ನಿರ್ವಹಿಸಿದರು. ಸಂಚಾಲಕ ಜೆ.ಪ್ರಹ್ಲಾದ್ ಶೆಟ್ಟಿ ಮಾರ್ಗದರ್ಶನ ನೀಡಿದರು.


