ವಿಟ್ಲ: ವಿದ್ಯಾರ್ಥಿಗಳಿಗೆ ಕಾನೂನಿನ ಅಡಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಉದ್ದೇಶ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶೆ ಪ್ರತಿಭಾ ಡಿ.ಎಸ್ ತಿಳಿಸಿದ್ದಾರೆ.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾ.ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಇಲ್ಲಿನ ಸತ್ಯಸಾಯಿ ಲೋಕಸೇವಾ ಪೌಢಶಾಲಾ ಸಭಾಂಗಣ ಶಾರದಾ ವಿಹಾರ ಅಳಿಕೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಪನ್ಮೂ ವ್ಯಕ್ತಿ ನ್ಯಾಯವಾದಿ ಸುದರ್ಶನ್ ಕುಮಾರ್ ಎಂ., ಮಕ್ಕಳ ಕುರಿತಾದ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರ ಸಮಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ದ.ಕ.ಕೇಂದ್ರ ಸರಕಾರಿ ವಕೀಲರಾದ ಪ್ರಸಾದ್ ಕುಮಾರ್ ರೈ, ಮಾಜಿ ಅಧ್ಯಕ್ಷ ವೆಂಕಟ್ರಮಣ ಶಣೈ , ಶ್ರೀಧರ ಪೈ, ಅಜಿತ್ ಕುಮಾರ್ ರಾವ್, ಆಶಾಮಣಿ ಡಿ.ರೈ, ಸತೀಶ್ ಬಿ., ಚಂದ್ರಶೇಖರ ಬೈರಿಕಟ್ಟೆ , ತಾ.ಕಾ.ಸೇವೆಗಳ ಸಮಿತಿ ಸಿಬ್ಬಂದಿ ನರಸೇಗೌಡ ಉಪಸ್ಥಿತರಿದ್ದರು.
ಅಳಿಕೆ ಗ್ರಾ.ಪಂ.ಅಧ್ಯಕ್ಷ ಪದ್ಮನಾಭ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಕಾರ್ತಿಕ್ ವಂದಿಸಿದರು. ಶಿಕ್ಷ ನಾರಾಯಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

