ವಿಟ್ಲ: ವಿದ್ಯಾರ್ಥಿಗಳು ಪರಿಸರದ ಮಹತ್ವವನ್ನು ಅರಿತು, ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನು ವಹಿಸಬೇಕು ಎಂದು ನಿವೃತ್ತ ಹಿಂದಿ ಉಪನ್ಯಾಸಕಿ ಜಯಲಕ್ಷ್ಮೀ ಕ.ಜೆ. ಕರೆ ನೀಡಿದ್ದಾರೆ.
ಗ್ರಂಥಾಲಯ ಹಾಗೂ ವಿಜ್ಞಾನ ಸಮಿತಿಯ ವತಿಯಿಂದ ಇಲ್ಲಿನ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ವಿಜ್ಞಾನ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎ.ಯಸ್ ಆದರ್ಶ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪ್ರಕಾಶ್ ನಾಯಕ್, ಗ್ರಂಥಪಾಲಕರಾದ ರಮೇಶ್ ಎಂ.ಎಸ್, ಪೂರ್ಣಿಮಾ, ಪ್ರಶಾಂತ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫಾತಿಮತ್ ಶಿಫಾ ಸ್ವಾಗತಿಸಿ, ಮಿಥುನ್ ಕೆ.ಎಂ. ವಂದಿಸಿ, ಉಪನ್ಯಾಸಕ ಚಂದ್ರಕಾಂತ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಗಳಾದ ರಕ್ಷಾ, ಮನಿಷಾ, ಅನುಷಾ ಆಶಯಗೀತೆ ಹಾಡಿದರು.


