ವಿಟ್ಲ: ಇಕೋ ಕ್ಲಬ್ ವಿಠಲ ಪ್ರೌಢ ಶಾಲೆ ಮತ್ತು ಜೆಸಿಐ ವಿಟ್ಲ ಘಟಕ ಸಹಯೋಗದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ “ಮಗುವಿಗೊಂದು ಮರ ಶಾಲೆಗೊಂದು ವನ” ಕಾರ್ಯಕ್ರಮ ಮಂಗಳವಾರ ನಡೆಯಿತು.
ಈ ವೇಳೆ ಜೆಸಿಐ ವಲಯ 15ರ ಗೋಗ್ರೀನ್ ಸಂಯೋಜಕ ಬಾಬು.ಕೆ ವಿ. ಅವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಪರಿಸರದ ಬಗ್ಗೆ ಮಹತ್ವ ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಕಿರಣ್ ಕುಮಾರ್ ಹಾಗೂ ಜೆಸಿಐ ವಿಟ್ಲ ನಿಕಟ ಪೂರ್ವಧ್ಯಕ್ಷ ರಮೇಶ್ ಬಿ.ಕೆ ಉಪಸ್ಥಿತರಿದ್ದರು.
ಶಿಕ್ಷಕ ಹಾಗೂ ಇಕೋ_ಕ್ಲಬ್ ನಿರ್ದೇಶಕ ರಾಜಶೇಖರ್ ಸ್ವಾಗತಿಸಿ ವಂದಿಸಿದರು.


