ಮಂಗಳೂರು: ಭಾರೀ ಮಳೆಯಿಂದಾಗಿ ಮನೆಯ ಹಿಂಬದಿಯ ಆವರಣ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಕೆಪಿಟಿಯ ಉದಯನಗರ ಬಳಿ ನಡೆದಿದೆ.
ಮಣ್ಣು ಕುಸಿದು ಬಿದ್ದ ಪರಿಣಾಮ ಅದರಡಿಯಲ್ಲಿ ಸಿಲುಕಿ 60ರ ಹರೆಯದ ಮೋಹಿನಿ ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಭಾರೀ ಮಳೆಯಿಂದಾಗಿ ತನ್ನ ಮನೆಯ ಹಿಂಬದಿಯಲ್ಲಿ ನೀರು ನಿಂತಿರುವುದನ್ನು ತೆರುವಗೊಳಿಸಲು ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೋಹಿನಿ ಅವರಿಗೆ ಕೆಲವು ವರ್ಷಗಳ ಹಿಂದಷ್ಟೇ ಹೃದಯಶಸ್ತ್ರಚಿಕಿತ್ಸೆಯಾಗಿತ್ತು. ಹೀಗಾಗಿ ಅವರು ತನ್ನ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರು. ಮಳೆಯ ಕಾರಣದಿಂದಾಗಿ ತನ್ನ ಮನೆಗೆ ಆಗಮಿಸಿದ್ದರು ಎಂದು ಅವರ ಸೋದರಿ ತಿಳಿಸಿದ್ದಾರೆ.

