ಮಂಗಳೂರು: ರೌಡಿ ಶೀಟರ್ ಮೆರ್ಲಿಕ್ ಅಂತೋನಿ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಗರ ದಕ್ಷಿಣ ವಿಭಾಗದ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.
ಗೋರಿಗುಡ್ಡೆ ನಿವಾಸಿಗಳಾದ ನಿಶಾಕ್ ಪೂಜಾರಿ ( 28), ಗೋರಿಗುಡ್ಡೆಯ ವಿನೇಶ್ ಕುಮಾರ್ ( 30) , ಮುಳಿಹಿತ್ಲು ನಿವಾಸಿ ಸಚಿನ್ ಶೆಟ್ಟಿ (22), ಜಪ್ಪಿನ ಮೊಗರು ವಿನ ಗಣೇಶ್ ಕುಲಾಲ್ (34), ನೆಕ್ಕರೆ ಮಾರ್ ನ ಪ್ರವೀಣ್ ಪೂಜಾರಿ( 42) , ಜೆಪ್ಪು ಕುಡ್ಪಾಡಿ ಸಂದೀಪ್ ಶೆಟ್ಟಿ (33) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರಗಳು, ಎರಡು ಮೋಟರ್ ಸೈಕಲ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಲಾಗಿದೆ.
ಏನಿದು ಪ್ರಕರಣ: ಮೆರ್ಲಿಕ್ 2016ರಲ್ಲಿ ಮಾರ್ನಮಿ ಕಟ್ಟೆ ಸಂದೀಪ್ ಶೆಟ್ಟಿಯನ್ನು ಮಾರಾಕಾಸ್ತ್ರಗಳಿಂದ ಕೊಲೆ ನಡೆಸಲು ಯತ್ನಿಸಿದ್ದು, ಇದಕ್ಕೆ ಪ್ರತಿಕಾರವಾಗಿ ಸಂದೀಪ್ ಶೆಟ್ಟಿ ಪ್ರೇರಣೆಯಂತೆ ಡಿ.25ರಂದು ತಡರಾತ್ರಿ ಐದು ಮಂದಿಯ ತಂಡವೊಂದು ಮೆರ್ಲಿಕ್ ಡಿಸೋಜ ಮನೆಗೆ ನುಗ್ಗಿ ಆತನ ಅಜ್ಜಿ ಎದುರೇ ತಲವಾರಿನಿಂದ ಹಲ್ಲೆ ನಡೆಸಿದ್ದರಿಂದ ಆತ ಮೃತಟ್ಟಿದ್ದ.

