ಕೆನರಾ ಎಂಜಿನಿಯರಿಂಗ್ ಕಾಲೇಜಿನ ರಾಜ್ಯೋತ್ಸವ ಸಂಭ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ. 
ಮಂಗಳೂರು: ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಹೊಸತನದ ವಾತಾವರಣಕ್ಕಾಗಿ ಕನಸು ಕಟ್ಟುವ ಅದಕ್ಕಾಗಿ ಶ್ರಮಿಸುವ ಉತ್ಸಾಹ ನಮ್ಮಲಿದ್ದಾಗ ಮಾತ್ರ ಕನಸಿನ ಕನರ್ಾಟಕ, ರಾಷ್ಟ್ರ ನಿಮರ್ಾಣದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾಥರ್ಿಗಳು ಅವಕಾಶಗಳ ಹೊಸ ಸಾಧ್ಯತೆಯನ್ನು ತೆರೆಯುವ ಪ್ರಯತ್ನ ನಡೆಸಬೇಕು. ಬೆಂಗಳೂರು ಹೊರತಾಗಿ ಕರಾವಳಿಯ ಭಾಗದಲ್ಲಿಯೂ ಹಾಡರ್್ವೇರ್ ಪಾಕರ್್ಗಳ ನಿಮರ್ಾಣ ಸಾಧ್ಯತೆಯನ್ನು ಸಾಕಾರಗೊಳಿಸಿ ರಾಷ್ಟ್ರದ ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಂಡು ಮುನ್ನಡೆಯಬೇಕು ಎಂದು ಖ್ಯಾತ ಚಿಂತಕ, ಅಂಕಣಕಾರ ಚಕ್ರವತರ್ಿ ಸೂಲಿಬೆಲೆ ಹೇಳಿದರು. ಅವರು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Sulibele
ವಿಶ್ವದ ದೊಡ್ಡ ರಾಷ್ಟ್ರಗಳಿಗಿಂತ ಹಿರಿದಾದ ಮತ್ತು ಸಹಸ್ರಾರು ವರ್ಷಗಳ ಹೆಮ್ಮೆಯ ಪರಂಪರೆ ಭಾರತದ್ದಾಗಿದೆ. ನಮ್ಮ ನಡೆ ನುಡಿ  ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸಬೇಕು.  ಕನರ್ಾಟಕದ ಗೌರವವನ್ನು ವಿಶ್ವ ಮಟ್ಟದಲ್ಲಿ ಎತ್ತರಕ್ಕೇರಿಸುವುದೇ ನಮ್ಮ ಗುರಿ ಎನ್ನುವ ಸಂಕಲ್ಪದೊಂದಿಗೆ ಮುನ್ನಡೆದಾಗ ಸಾರ್ಥಕ ಬೆಳವಣಿಗೆ ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಸುಂದರ ಬದುಕಿಗಾಗಿ ನಮ್ಮ ಇತಿಹಾಸ ಮತ್ತು ಜೀವನೋಲ್ಲಾಸಕ್ಕಾಗಿ ಸಾಹಿತ್ಯದ ಜತೆ ನಾವು ಬೆರೆಯಬೇಕು ಎಂದವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಅಧ್ಯಕ್ಷತೆವಹಿಸಿದ್ದರು. ಎನ್ನೆಸ್ಸೆಸ್ ಘಟಕ ಸಂಯೋಜಕರಾದ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ವಿದ್ಯಾಥರ್ಿಗಳಾದ ಗಣೇಶ್ ನಾಯಕ್ ವಂದಿಸಿದರು. ಹರೀಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನವಿತರಣೆ, ವಿದ್ಯಾಥರ್ಿಗಳಿಂದ ಕನ್ನಡದ ಜನಪ್ರಿಯ ಗೀತೆಗಳ ಸಮೂಹಗಾಯನ ನಡೆಯಿತು.

By suddi9

Leave a Reply

Your email address will not be published. Required fields are marked *