ಮಂಗಳೂರು: ಪ್ಯಾಥಾಲಜಿ ವಿಭಾಗ, ಯೆನೆಪೋಯ ವೈದ್ಯಕೀಯ ಕಾಲೇಜು, ಯೆನೆಪೋಯ ಮಹಾವಿಶ್ವವಿದ್ಯಾಲಯ, ದೇರಳಕಟ್ಟೆ, ಮಂಗಳೂರು ಹಾಗೂ ಕರ್ನಾಟಕ ಪೆಥಲಾಜಿಸ್ಟ್ ಮತ್ತು ಮೈಕ್ರೋಬಯಾಲಜಿಸ್ಟ್ ಸಂಘದ ದಕ್ಷಿಣ ಕನ್ನಡದ ಶಾಖೆಯ ವತಿಯಿಂದ, ಸಿ.ಮ್.ಇ ಮತ್ತು ವೈಜ್ಞಾನಿಕ ಕಾರ್ಯಕ್ರಮವನ್ನು ನವೆಂಬರ್ 5 ರಂದು ಯೆನೆಪೋಯ ವೈದ್ಯಕೀಯ ಕಾಲೇಜಿನ ಪ್ಯಾಥೋಲಾಜಿ ವಿಭಾಗದಲ್ಲಿ ನಡೆಸಲಾಯಿತು.

yenepoya-3

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಗುಲಾಮ್ ಜೀಲನಿ ಖಾದಿರಿ, ಅತಿಥಿ ಉಪನ್ಯಾಶಕರಾಗಿ ಡಾ. ಊರ್ಮಿಳಾ ಎನ್ ಕಡಿಲ್ಕರ್, ಪೆಥಾಲಜಿ ಪ್ರೊಫೆಸರ್, ಕೆಎಂಸಿ ಮಂಗಳೂರು ಮತ್ತು ಡಾ. ಮುಕ್ತ ಆರ್ ಪೈ, ಪೆಥಾಲಜಿ ಪ್ರೊಫೆಸರ್, ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಮಂಗಳೂರು ಇವರು ಭಾಗವಹಿಸಿದರು. ಇದಲ್ಲದೆ ಯೆನೆಪೋಯ ಕಾಲೇಜಿನ ಪ್ಯಾಥಾಲಜಿ ವಿಭಾಗದ ಪ್ರೊಫೆಸರ್‍ಗಳು ಕುತೂಹಲಕಾರಿ ರೋಗಗಳ ವಿಶ್ಲೇಷಣೆಗಳನ್ನು ಮಂಡಿಸಿದ್ದಾರೆ.

yenepoya

ಈ ಕಾರ್ಯಾಗಾರವನ್ನು ಡಾ. ರಾಮದಾಸ್ ನಾಯಕ್, ಪ್ರೊಫೆಸರ್ ಹಾಗೂ ಮುಖ್ಯಸ್ಥರು ಪ್ಯಾಥಾಲಜಿ ವಿಭಾಗ ಯೆನೆಪೋಯ ವೈದ್ಯಕೀಯ ಕಾಲೇಜು ಹಾಗೂ ಡಾ. ಪ್ರೇಮ ಸಲ್ದಾನ, ಪ್ರೊಫೆಸರ್ ಹಾಗೂ SK-KCIAPM  ಘಟಕದ ಅಧ್ಯಕ್ಷರು, ಇವರುಗಳ ಸೂಕ್ತ ಮಾರ್ಗದರ್ಶನದಲ್ಲಿ ನಡೆಯಿತು. SK-KCIAPM  ಘಟಕದ ಇತರೆ ಪದಾಧಿಕಾರಿಗಳಾದ ಡಾ. ಶಾಂತಲಾ ಪಿ ಆರ್, ಡಾ. ಸೌಮ್ಯ ಬಿ. ಯು ಮತ್ತು ಡಾ. ಕೃಷ್ಣಪ್ರಸಾದ್ ಹೆಚ್. ವಿ. ರವರು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಸಹಾಯಕರಾಗಿರುತ್ತಾರೆ.

By Suddi9

Leave a Reply

Your email address will not be published. Required fields are marked *