ಬೆಂಗಳೂರು, ಮಾ. 29 : ಮಾರ್ಚ್ 31ರ ನಂತರ ಬ್ಯಾಂಕ್‌ಗಳಿಗೆ ಎಷ್ಟು ದಿನ ಸರಣಿ ರಜೆ ಇದೆ? ಎಂಬ ಗೊಂದಲ ಬಗೆಹರಿದಿದೆ. ಮಹಾವೀರ ಜಯಂತಿ ಪ್ರಯುಕ್ತ ಏ. 2ರಂದು ಮತ್ತು ಗುಡ್ ಫ್ರೈಡೆಗಾಗಿ ಏ. 3ರಂದು ಸರ್ಕಾರಿ ರಜೆ ಇದೆ. ಆದ್ದರಿಂದ ಏ. 1 ರಿಂದ ಏ.3ರ ವರೆಗೆ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಿರುತ್ತದೆ. ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಾ. 28 ರಿಂದ ಏ. 5ರ ವರೆಗೂ ಬ್ಯಾಂಕ್ ಸೇವೆಗಳಿಗೆ ಅಡ್ಡಿಯಾಗಲಿದೆ ಎಂಬ ಭಾರತೀಯ ವಾಣಿಜ್ಯ ಮಹಾಸಂಘದ (ಅಸೋಚಾಂ) ಹೇಳಿಕೆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ
ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಾ. 28 ರಿಂದ ಏ. 5ರ ವರೆಗೂ ಬ್ಯಾಂಕ್ ಸೇವೆಗಳಿಗೆ ಅಡ್ಡಿಯಾಗಲಿದೆ ಎಂಬ ಭಾರತೀಯ ವಾಣಿಜ್ಯ ಮಹಾಸಂಘದ (ಅಸೋಚಾಂ) ಹೇಳಿಕೆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. [ಬ್ಯಾಂಕುಗಳಿಗೆ 5 ದಿನದ ರಜೆ?] ಮಾ.31ರಂದು ಹೆಚ್ಚುವರಿ ಕೆಲಸ : ಈ ವರ್ಷದ ಆರ್ಥಿಕ ವಹಿವಾಟು ಮುಕ್ತಾಯಗೊಳ್ಳುವ ಮಾ.31ರಂದು ಬ್ಯಾಂಕ್‌ಗಳು ಒಂದು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಲಿವೆ. ಕಳೆದ ವರ್ಷವೂ ಆರ್‌ಬಿಐ ಸೂಚನೆಯಂತೆ ಒಂದು ಗಂಟೆ ಹೆಚ್ಚುವರಿಯಾಗಿ ವಹಿವಾಟು ನಡೆಸಲಾಗಿತ್ತು ಎಂದು ನರಸಿಂಹಮೂರ್ತಿ ತಿಳಿಸಿದರು. [2015ರ ಬ್ಯಾಂಕ್ ರಜೆ ಪಟ್ಟಿ] ಇನ್ನು ಏಪ್ರಿಲ್ 1ರ ಬುಧವಾರ ಆರ್ಥಿಕ ವರ್ಷದ ಮೊದಲ ದಿನವಾಗಿದ್ದು, ಅಂದು ಗ್ರಾಹಕರಿಗೆ ವಹಿವಾಟು ನಡೆಸಲು ಅವಕಾಶ ನೀಡಲಾಗುವುದಿಲ್ಲ. ಆದರೆ, ಬ್ಯಾಂಕಿನ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಮಹಾವೀರ ಜಯಂತಿಗಾಗಿ ಏ. 2ರಂದು ಮತ್ತು ಗುಡ್ ಫ್ರೈಡೆಗಾಗಿ ಏ. 3ರಂದು ಸರ್ಕಾರಿ ರಜೆ ಇದೆ. [2015ರ ಸರ್ಕಾರಿ ರಜೆ ಪಟ್ಟಿ ಇಲ್ಲಿದೆ] ಆದ್ದರಿಂದ ಏ.1ರ ಬುಧವಾರದಿಂದ ಏ.3ರ ವರೆಗೆ ಮಾತ್ರ ಬ್ಯಾಂಕ್‌ಗಳು ಸಂಪೂರ್ಣವಾಗಿ ಮುಚ್ಚಿರುತ್ತದೆ. ಏ. 4 ಶನಿವಾರ ಗ್ರಾಹಕರು ಅರ್ಧ ದಿನದ ವಹಿವಾಟು ನಡೆಸಬಹುದಾಗಿದೆ ಎಂದು ನರಸಿಂಹಮೂರ್ತಿ ಅವರು ಮಾಹಿತಿ ನೀಡಿದರು. ಎಸ್‌ಬಿಐನಿಂದ ಹೆಚ್ಚುವರಿ ಕೆಲಸ : ಏ.4ರ ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಎಲ್ಲಾ ಶಾಖೆಗಳೂ 2 ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೂರು ದಿನದ ಸರಣಿ ರಝೆ ಇರುವ ಹಿನ್ನಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
