ಬಂಟ್ವಾಳ :ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಜಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ (ರಿ)ಕಲ್ಲಡ್ಕ ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಸಕ್ತರಿಗೆ ನೆರವು ಒಲವು ಕಾರ್ಯಕ್ರಮವು ಕಲ್ಲಡ್ಕ ನೇತಾಜಿ ಯುವಕ ಮಂಡಲದಲ್ಲಿ ನಡೆಸಲಾಯಿತು.

ಪ್ರಜ್ಯೋತಿ ಬಳಗದ ಸಂಸ್ಥಾಪಕರು, ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಚಂಚಲ ತೇಜೋಮಯ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರೇ ಉಳಿತಾಯವನ್ನು ಮಾಡಿ ಪ್ರಜ್ಯೋತಿ ಬಳಗವನ್ನು ಕಟ್ಟಿ ಅಶಕ್ತರಿಗೆ ನೆರವು ನೀಡುವ ಮೂರನೇ ಕಾರ್ಯಕ್ರಮವು ಇದಾಗಿದೆ ಎಂದರು.ಮೀನಾಕ್ಷಿ ಆರ್ ಪೂಜಾರಿ ಇವರ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಪ್ರಜ್ಯೋತಿ ಬಳಗದಿಂದ ಏಳು ಮಂದಿ ಆಸಕ್ತರಿಗೆ ಸಹಾಯಧನ ಹಾಗೂ ಹತ್ತು ಮಂದಿ ಪೌರ ಕಾರ್ಮಿಕರಿಗೆ ಆಹಾರದ ಕಿಟ್ ನ್ನು ವಿತರಿಸಲಾಯಿತು.ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರನ್ನು ಅಭಿನಂದಿಸಲಾಯಿತು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಡಾ. ಕಮಲಾ ಪ್ರಭಾಕರ್ ಭಟ್, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷೆ ಉಷಾ ನಾಯಕ್ ,ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ,ಪ್ರಜ್ಯೋತಿ ಬಳಗದ ಮುಖ್ಯಸ್ಥರಾದ ಮನೋರಮ ಉಮೇಶನ್ ಮತ್ತು ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ವಿದ್ಯಾಕೊಟ್ಟಾರಿ ,ತಾಲೂಕು ಒಕ್ಕೂಟದ ಗೌರವಾಧ್ಯಕ್ಷರಾದ ಹೇಮಲತಾ ಜೆ ಸಾಲ್ಯಾನ್ ಉಪಸ್ಥಿತರಿದ್ದರು.
ವಿಜಯ ಪ್ರಕಾಶ್ ಇವರು ಪ್ರಾರ್ಥಿಸಿ,,ಲಕಿತ ಆರ್ ಶೆಟ್ಟಿ ಸ್ವಾಗತಿಸಿದರು, ಹಿರಣ್ಮಯಿ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
