ಬಂಟ್ವಾಳ: ವಿಕಸಿತ ಭಾರತ ಬಂಟ್ವಾಳ ಇದರ ವತಿಯಿಂದ “ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ’ ಅಭಿಯಾನದಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳೊಂದಿಗೆ “ಯುವಸಂವಾದ” ಕಾರ್ಯಕ್ರಮ ನಡೆಸಲಾಯಿತು.ಶ್ರೀ ರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ ಕಟ್ಟೆಯವರು ದೀಪ ಪ್ರಜ್ವಲನಗೈದು ಉದ್ಘಾಟಿಸಿ ಶುಭಹಾರೈಸಿದರು.


ಬಳಿಕ ನಡೆದ ಯುವಸಂವಾದದಲ್ಲಿ ಚಿಕ್ಕಮಗಳೂರಿನ ಯುವನಾಯಕ ಪುಣ್ಯಪಾಲ್ ಜೆ ಯವರು ದೇಶದ ಪ್ರಸ್ತುತ ಆಗು-ಹೋಗುಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.ಈ ಸಂಧರ್ಭ  ಶ್ರೀ ರಾಮ ಪದವಿಪೂರ್ವ ವಿದ್ಯಾಕೇಂದ್ರದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಯುವಸಂವಾದ ಜಿಲ್ಲಾ ಸಂಯೋಜಕ ಅವಿನಾಶ್ ಸುವರ್ಣ, ಜಿಲ್ಲಾ ನಾಯಕರಾದ ಸುರೇಶ್ ಕೋಟ್ಯಾನ್ ನರಿಕೊಂಬು, ಬಿಜೆಪಿ ಬಂಟ್ವಾಳ ಮಂಡಲದ ಯುವ ಮೋರ್ಛಾ ಅಧ್ಯಕ್ಷ ದಿನೇಶ್‌ ಶೆಟ್ಟಿ ದಂಬೆದಾ‌ರ್ ಉಪಸ್ಥಿತರಿದ್ದರು.
ವಿಕಸಿತ ಭಾರತ ಸಮಿತಿಯ ಪ್ರಮುಖ ಸಂಪತ್ ಕೋಟ್ಯಾನ್ ಕಡೇಶಿವಾಲಯ ಅವರು ಸ್ವಾಗತಿಸಿದರು.ನಿಕಟಪೂರ್ವ ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು  ವಂದಿಸಿದರು.


ಸಂವಾದದಲ್ಲಿ ಪ್ರಮುಖರಾದ ಅಶ್ವಿನ್ ಅಮೀನ್, ಸಂದೀಪ್ ಕೆಲಿಂಜ, ಕೌಶಿಲ್ ಶೆಟ್ಟಿ, ಹೇಮಚಂದ್ರ ಶಂಭೂರು, ದೀಪಕ್ ಶೆಟ್ಟಿಗಾರ್, ಲತೀಶ್ ಕುರ್ಮಾನು ಹಾಗು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

By Suddi9