ಬಂಟ್ವಾಳ: ತುಂಬೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನುಸಂಭ್ರಮದಿಂದ ಆಚರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕರು, ಬಂಟ್ವಾಳ ತಾಲೂಕು ಭಾರತ ಸೇವಾದಳ ದ ಅಧ್ಯಕ್ಷರಾದ ಟಿ.ಶೇಷಪ್ಪ ಮಾಸ್ಟ ರ್ ಅವರು ಪಂಡಿತ್ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಟಾಣಿಗಳಿಂದ ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶೇಷಪ್ಪ ಮಾಸ್ಟರ್ ಅವರು ಭಾರತ ದೇಶದ ಪ್ರಥಮ ಪ್ರಧಾನ ಮಂತ್ರಿ ನೆಹರೂರವರ ಜನ್ಮ ದಿನವನ್ನು ನಾವು ದೇಶಾದ್ಯಾಂತ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಪ್ರಚಲಿತ ವಿದ್ಯಮಾನದಲ್ಲಿ ಅರೋಗ್ಯವಂತ, ಸಚ್ಚಾರಿತ್ರ್ಯ ವಂತ ಮಕ್ಕಳನ್ನು ಬೆಳೆಸುವುದು ಹೆತ್ತವರಿಗೆ ಸವಾಲಾಗುತ್ತಿದೆ.
ಮೊಬೈಲ್, ದುರ್ವ್ಯಸನ,ದುಃಶ್ಚಟ ಗಳಿಂದ ಮಕ್ಕಳನ್ನು ದೂರವಿರಿಸಿ ಜಾಗರೂಕತೆಯಿಂದ ನಮ್ಮ ಕ್ಕಳನ್ನು ಪಾಲಿಸಿ ಪೋಶಿಸಿ ಬೆಳೆಸಿದಾಗ ಅರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು. ದಿನಾಚರಣೆ ಪ್ರಯುಕ್ತ ನಡೆದ ಆಟೋಟ ಸ್ಪರ್ಧಾ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಸಿಹಿತಿಂಡಿ, ಕೇಕ್, ಪಾನೀಯಗಳನ್ನು ವಿತರಿಸಲಾಯಿತು.
ಪುಟಾಣಿಗಳು ತಮ್ಮ ಹೆತ್ತವರರೊಂದಿಗೆ ಖುಷಿಯಾಗಿ ಕುಣಿದು ಕುಪ್ಪಳಿಸಿದರು. ಮಾಜಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಅಂಗನವಾಡಿ ಕಾರ್ಯಕರ್ತೆಯರಾದ ಸಂಧ್ಯಾ, ಫರ್ ಝನಾ, ಗೀತಾ ಉಪಸ್ಥಿತರಿದ್ದರು. ಸಹಾಯಕಿ ಮಮತಾ ಸಹಕರಿಸಿದರು.
