ಬಂಟ್ವಾಳ: ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 7 ಮತ್ತು 8ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದ ಹಿನ್ನೆಲೆಯಲ್ಲಿ ಮಾಹಿತಿ ಕಾರ್ಯಕ್ರಮ ಜುಲೈ 31ರಂದು ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ವಿಕಸಿತ ಬಂಟ್ವಾಳದ ವತಿಯಿಂದ ಈ ಮಾಹಿತಿ ಕಾರ್ಯಕ್ರಮವುಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದ್ದು,ಉದ್ಯೋಗ ಮೇಳದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಇದ್ದು, ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಇರಲಿದ್ದು, ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೆಡ್ಯೂಮ್ ತಯಾರಿ ಕುರಿತು ಮಾಹಿತಿ, ಸಂದರ್ಶನಕ್ಕೆ ಅಗತ್ಯ ಮಾಹಿತಿ, ಕೆರಿಯರ್ ಗೈಡೆನ್ಸ್ ಸೆಶನ್, ನೋಂದಣಿ ಮತ್ತು ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡುವ ಕಾರ್ಯ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಬಿ.ದೇವದಾಸ ಶೆಟ್ಟಿ 9449210250 ಮತ್ತು ಶ್ರೀನಿವಾಸ್ 7975223865 ಸಂಪರ್ಕಿಸುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ.
