ಬಂಟ್ವಾಳ:  ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ,  ಸ್ತ್ರೀ ಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ವತಿಯಿಂದ‌ “ಆಟಿದ ಕೂಟ” ನಡೆಸಲಾಯಿತು.

ಅಂಗನವಾಡಿ ಪುಟಾಣಿಗಳ ಮನೋರಂಜನೆ ಹಾಗೂ ಪೋಷಕರೇ ಸ್ವತ: ತಯಾರಿಸಿದ ವಿವಿಧ ಬಗೆಯ ಆಹಾರಗಳನ್ನು ಉಣಬಡಿಸಲಾಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆಮಂಜುಳ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಶ್ರೀ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮೋಹನ್ ಪಿ ಯಸ್,ಸ್ಥಳೀಯರಾದ ಕುಮಾರ ಶೆಟ್ಟಿ,ಉಮ್ಮರ್ ಫಾರೂಕ್, ಹರೀಶ್ ಶೆಟ್ಟಿ ಕಾಂದಿಲ, ಒಕ್ಕೂಟದ ಅಧ್ಯಕ್ಷೆ  ಪದ್ಮಿನಿ,  ಪೂರ್ಣಿಮಾ*ಸ್ತ್ರೀ ಶಕ್ತಿ ಗಂಪು , ಅಂಗನವಾಡಿ ವಿಕಾಸ ಸಮಿತಿಯ ಸದಸ್ಯರು ಹಾಗೂ ಸಂಜೀವಿನಿ ಒಕ್ಕೂಟದ  ಸದಸ್ಯೆಯ ರು ಭಾಗವಹಿಸಿದರು.
ಅಂಗನವಾಡಿ ಕಾರ್ಯಕರ್ತೆ  ಸುಂದರಿ ನಿರೂಪಿಸಿದರು.ಜಯಶ್ರಿ ಸ್ವಾಗತಿಸಿ, ಚೈತ್ರ ವಂದಿಸಿದರು.

By Suddi9

Leave a Reply

Your email address will not be published. Required fields are marked *