ಬಂಟ್ವಾಳ: ಶಾಲೆಯಿಂದ ಯಾರೂ ವಂಚಿತರಾಗಬಾರದು. ಜತೆಗೆ ಅತ್ಯಾಧುನಿಕ ಸೌಕರ್ಯದ ಶಿಕ್ಷಣ ಸರಕಾರಿ ಶಾಲೆಯ ಮೂಲಕ ಮಕ್ಕಳಿಗೆ ಸುಲಭವಾಗಿ ದೊರೆಯಬೇಕು ಎಂಬುದೇ ದಡ್ಡಲಕಾಡು ಶಾಲೆಯ ಆಶಯ ಎಂದು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.ಬಂಟ್ವಾಳ ತಾಲೂಕಿನ ದಡ್ಡಲಕಾಡು ಪಿಎಂಶ್ರೀ ಸರಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲರಿಗೂ ಶಿಕ್ಷಣ ಸಿಗಬೇಕು. ಯಾರೂ ಕೂಡ ಶಿಕ್ಷಣದಿಂದ ದೂರ ಉಳಿಯಬಾರದು ಎಂಬ ಕಾಳಜಿಯಿಂದ ದಡ್ಡಲಕಾಡು ಶಾಲೆ ಯಶಸ್ವಿಯಾಗಿ ಶಿಕ್ಷಣ ಸೇವೆ ನಡೆಸುತ್ತಿದೆ ಎಂದರು.

ಇದೇ ವೇಳೆ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಾದ ಹಿನ್ನೆಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದ ಎಸ್ ಡಿಎಂಸಿ ಅಧ್ಯಕ್ಷ ಶೇಖರ್ ಅಂಚನ್, ಪ್ರಾಥಮಿಕ ವಿಭಾಗದ ಎಸ್ ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಗೌಡ, ಪ್ರಮುಖರಾದ ರಾಜೇಶ್ ನೆಕ್ಕರೆ, ರಾಮಚಂದ್ರ ಪೂಜಾರಿ ಕರೆಂಕಿ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶೈಲೇಂದ್ರ ಕುಮಾರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಜಯಶ್ರೀ, ಸಂಸ್ಥೆಯ ಹಿರಿಯ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಶಿಕ್ಷಕರಾದ ವಿಕ್ರಂ ಉಪಸ್ಥಿತರಿದ್ದರು.
ಶಿಕ್ಷಕಿ ವಿನಯ ಪ್ರಾರ್ಥಿಸಿದರು. ದೀಕ್ಷಿತಾ ಅವರು ಸಮ್ಮಾನಿತರ ವಿವರ ವಾಚಿಸಿದರು. ಭವ್ಯ ಹಾಗೂ ಅನುಶ್ರೀ ನಿರೂಪಿಸಿದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು  ಮೆರವಣಿಗೆಯಲ್ಲಿ ಶಾಲೆಗೆ  ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಭವ್ಯ ಸ್ವಾಗತ ಕೋರಿದರು. ಪನ್ನೀರಿನ ಜತೆಗೆ ಪುಷ್ಪ ಅರ್ಚನೆ ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. 

By suddi9

Leave a Reply

Your email address will not be published. Required fields are marked *