ಬಂಟ್ವಾಳ: ಪುದುಗ್ರಾಮದ ಕಡೆಗೋಳಿಯಲ್ಲಿ ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡ”ಶ್ರೀ ನಂದ” ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಸಂಸದರು, ದೇಶದ ಪ್ರದಾನಿ ನರೇಂದ್ರ ಮೋದಿಯವರ ಆಶಯದಂತೆ ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮೂಲಕ ಮಹಿಳಾ ಸಹಕಾರಿಗಳು ಸಬಲೀಕರಣಗೊಳ್ಳುತ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಹಾರೈಸಿದರು . ನೂತನ ಕಟ್ಟಡ “ಶ್ರೀನಂದ”ದ ಉದ್ಘಾಟನೆಯನ್ನು ದ.ಕ. ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ , ಗೋದಾಮನ್ನು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ವ್ಯವಸ್ಥಾಪನಾ ನಿರ್ದೇಶಕರಾದ ವಿವೇಕ ಡಿ , ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ಡಾ ದೇವಪ್ರಸಾದ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.

ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ನಿರ್ದೇಶಕರಾದ ಕೆ.ಪಿ ಸುಚರಿತ ಶೆಟ್ಟಿ, ಸುಧಾಕರ ರೈ ಬೋಳಂತೂರು,ಸವಿತಾ ಎನ್ ಶೆಟ್ಟಿ, ನಂದರಾಮ್ ರೈ,ಮಂಗಳೂರು ಸ್ಕಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಶ್ರೀ ನಾಗಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಭಾಸ್ಕರ ಚೌಟ ಕುಮ್ಡೇಲು , ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ,ಒಕ್ಕೂಟದ ಉಪ ವ್ಯವಸ್ಥಾಪಕರಾದ ಜಾನೆಟ್ ರೊಸಾರಿಯೋ , ವಿಸ್ತರಣಾಧಿಕಾರಿ ಜಗದೀಶ್ , ಹಾಲು ಪರೀಕ್ಷಕರಾದ ಲಕ್ಷ್ಮಿ ನಾಣ್ಯ , ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷೆ ಹೇಮಲತಾ ಬಿ ಚೌಟ , ಉಪಾಧ್ಯಕ್ಷೆ ಗೀತಾ ಗಂಪದಕೋಡಿ ಉಪಸ್ಥಿತರಿದ್ದರು . ಕಾರ್ಯನಿರ್ವಹಣಾದಿಕಾರಿ ಆಶಾ ಲತಾ ತುಂಬೆಕೋಡಿ ವರದಿ ವಾಚಿಸಿದರು ನಿರ್ದೇಶಕಿ ಶಾಂತ ಡಿ ಚೌಟ ಸ್ವಾಗತಿಸಿದರು , ಸುಜಾತಾ ಕಿದೆಬೆಟ್ಟು ವಂದಿಸಿದರು , ಜಗದೀಶ್ ಕಡೆಗೋಳಿ ನಿರೂಪಿಸಿದರು.ಇದೇ ವೇಳೆ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಹಕಾರಿಗಳನ್ನು ಸನ್ಮಾನಿಸಲಾಯಿತು.
