oppo_2

ಬಂಟ್ವಾಳ:ಪಂಚರಾಜ್ಯದ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ ,ಅಸ್ಸಾಂ,ಪುದಚೇರಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ   ಬಿಜೆಪಿ ನೇತೃತ್ವದ ಎನ್ ಡಿಎ  ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಬಿ.ಸಿ.ರೋಡಿನಲ್ಲಿಯು
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

oppo_2

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ.ರೋಡಿನ ಪ್ಲೈಓವರ್ ತಳಭಾಗದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ,ಸಿಹಿ,ಚರುಮುರಿ ಹಂಚಿ ವಿಜಯೋತ್ಸವ ಆಚರಿಸಿದರಲ್ಲದೆ ಪ್ರಧಾನಿ ಮೋದಿ,ಗೃಹಸಚಿವ ಅಮಿತ್ ಶಾ ಪರ ಜೈಕಾರ ಕೂಗಿದರು ಬಿಜೆಪಿ ಪಕ್ಷದ ಕಾರ್ಯಕರ್ತರು ಸಿಹಿತಿಂಡಿ ಹಂಚಿದರು.
    ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ರಾಜ್ಯ ನಾಯಕಿ ಸುಲೋಚನ ಜಿ.ಕೆ.ಭಟ್, ಪಕ್ಷದ ಪ್ರಮುಖರಾದ ವಿಕಾಸ್ ಪುತ್ತೂರು, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ರಾಮದಾಸ್ ಬಂಟ್ವಾಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಮೋನಪ್ಪ ದೇವಶ್ಯ,ಪ್ರಭಾಕರ್ ಪ್ರಭು, ದಿನೇಶ್ ಶೆಟ್ಟಿ ದಂಬೆದಾರ್, ಗಣೇಶ್ ದಾಸ್ ,ಪ್ರಣಾಮ್ ಅಜ್ಜಿಬೆಟ್ಟು, ಮಹೇಶ್ ಶೆಟ್ಟಿ, ಭಾಸ್ಕರ ಟೈಲರ್, ಕಾರ್ತಿಕ್ ಬಲ್ಲಾಳ್, ಸದಾನಂದ ಹಳೆಗೇಟು, ಕೇಶವ ದೈಪಲ, ಮನೋಜ್ ಕಳ್ಳಿಗೆ, ಪ್ರೇಮನಾಥ ಶೆಟ್ಟಿ, ಸುನಿಲ್ ರೋಡ್ರಿಗಸ್ , ಎಲಿಯಾಸ್ ಮತ್ತಿತರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *