ಬಂಟ್ವಾಳ:ತಾಲೂಕಿನ  ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ 2019-20 ನೇ ಸಾಲಿನಲ್ಲಿ 75 ಕೋ.ರೂ.ವ್ಯವಹಾರ ನಡೆಸಿ 30.38 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಉಪಾಧ್ಯಕ್ಷ ಅಲ್ವಿನ್ ವಿ.ಲೋಬೋ ತಿಳಿಸಿದ್ದಾರೆ. ಸಂಘದ ವಠಾತದಲ್ಲಿ ನಡೆದ ಬ್ಯಾಂಕ್ ನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.6 ಡಿವಿಡೆಂಡ್ ನ್ನು ಪ್ರಕಟಿಸಿದರು.IMG-20201228-WA0048

ಸಂಘವು 1.23 ಲಕ್ಷ ರೂ.ಪಾಲು ಬಂಡವಾಳ ಹೊಂದಿದ್ದು,ವರದಿವರ್ಷದಲ್ಲಿ 16.20 ಲಕ್ಷ ಸಾಲ ವಿತರಿಸಲಾಗಿದ್ದು,99.88 ಶೇ.ಸಾಲ ವಸೂಲ ಮಾಡಲಾಗಿದೆ ಎಂದ ಅವರು ಕಳೆದ 9  ವರ್ಷಗಳಿಂದ ಸಂಘವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಸಾಲ ಪಡೆಯದೆ ಸ್ವಂತ ಬಂಡವಾಳದಿಂದಲೇ ಸಾಲವನ್ನು ವಿತರಿಸಲಾಗಿದೆಯಲ್ಲದೆ ಸತತ 9 ವರ್ಷದಿಂದ ಆಡಿಟ್ ವರ್ಗೀಕರಣದಲ್ಲು ‘ಎ’ತರಗತಿ ದರ್ಜೆಯನ್ನು ಪಡೆದಿದೆ ಎಂದರು.

ಸಂಘದ ಅಧ್ಯಕಗಷೆ ಮಲ್ಲಿಕಾ ವಿ.ಶೆಟ್ಟಿ,ನಿರ್ದೇಶಕರಾದ ಪದ್ಮನಾಭ ರಾವ್,ನರಸಿಂಹ ಹೊಳ್ಳ,ಶಿವಪ್ರಸಾದ್ ಕನಪಾಡಿ,ಕಮಲಾಕ್ಷ,ರಮೇಶ್ ತೋಮಸ್ ಸಲ್ದಾನ,ಅನಿಲ್ ಪಿಂಟೋ,ಪ್ಲೋಸಿಡಿಸೋಜ,ಪೂರ್ಣಿಮಾ ಬೆದ್ರಗುಡ್ಡೆ,ಪೂರ್ಣಿಮಾ ಕೆಂಪುಗುಡ್ಡೆ ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿದರು‌.ನಿರ್ದೇಶಕ ಸುರೇಶ್ ಭಂಡಾರಿ ವಂದಿಸಿದರು.ಲೊರೆಟ್ಟೋ ಶಾಖೆಯ ಮೆನೇಜರ್ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *