ಬಂಟ್ವಾಳ:ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕು ಹಾಗೂ ಮರಳು ಗಣಿಗಾರಿಕೆ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ಶಾಸಕರ ನಿಯೋಗ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮನವಿ ಸಲ್ಲಿಸಿತು.IMG-20201015-WA0005

ಕರಾವಳಿಯ ಮೂರು ಜಿಲ್ಲೆಗಳ ನದಿಗಳಲ್ಲಿ ಮುಳುಗಿ ಮರಳು ತೆಗೆಯುವ ಕ್ರಮ ಹಿಂದಿನಿಂದಲೂ ಇದ್ದು,ಅದನ್ನು ಮುಂದುವರಿಸಿ,ಕರಾವಳಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮರಳಗಾರಿಕೆಗೆ ಅನುಮತಿ ನೀಡಬೇಕು, ಈ ಹಿನ್ನಲೆಯಲ್ಲಿ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧವನ್ನು ತೆರವುಗೊಳಿಸಬೇಕೆಂದು ನಿಯೋಗ ಮನವಿ ಮಾಡಿತು. ಇದು ಕೇವಲ ಕರಾವಳಿಗೆ ಜಿಲ್ಲೆಗಳಿಗೆ ಮಾತ್ರ ಅನ್ವಯ ಆಗಬೇಕು ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿತು.ಹಾಗೆಯೇ ದ.ಕ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಿಂದ ಅಪಾರ ಹಾನಿಯಾಗಿದ್ದು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆಗೆ ಸರಕಾರ ಪರಿಹಾರ ಧನ ಬಿಡುಗಡೆ ಮಾಡಬೇಕು

ಎಂದು ಈ ಮನವಿ ಮಾಡಿರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು ಮಳೆಹಾನಿಗೆ ಮೊದಲ ಕಂತು 25 ಕೋ.ರೂ.ಬಿಡುಗಡೆಗೊಳಿಸುವ ಭರವಸೆ ನೀಡಿದರು. ಬಳಿಕ ಕಂದಾಯ ಸಚಿವ ಆರ್.ಆಶೋಕ್ ಅವರನ್ನು ಭೇಟಿಯಾದ ನಿಯೋಗ ಜಿಲ್ಲೆಯಲ್ಲಿ ಕುಮ್ಕಿ ಮಂಜೂರಾತಿ ಮತ್ತು ಮೂಲಗೇಣಿದಾರರು ಎದುರಿಸುತ್ತಿರುವ  ಚರ್ಚಿಸಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿ ಅವರೋಂದಿಗೆ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಹಿರಿಯ ಶಾಸಕರಾದ  ಅಂಗಾರ, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,  ವೇದವ್ಯಾಸ ಕಾಮತ್,  ಉಮಾನಾಥ ಕೋಟ್ಯಾನ್,  ಸಂಜೀವ ಮಠಂದೂರು, ಭರತ್ ಶೆಟ್ಟಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *