ಬಂಟ್ವಾಳ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕಿನ  ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ದ ತಡೆಗೋಡೆ ಕುಸಿದು ಬಿದ್ದಿದೆ.ಈಶ್ವರ (ಶ್ರೀ ಕಾರಿಂಜೇಶ್ವರ) ದೇವಸ್ಥಾನ ದ ಎಡ ಪಾರ್ಶ್ವ ದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು, ಬುಧವಾರ ಬೆಳಗ್ಗೆ ಸಿಬಂದಿಗಳ ಗಮನಕ್ಕೆ ಬಂದಿದೆ.download
ಇಲ್ಲಿ ಅಂಗಣದಲ್ಲಿ ವಾನರಗಳಿಗೆ ನೈವೇದ್ಯ ಬಡಿಸುತ್ತಿದ್ದು, ಅಂಗಣದ ಇಂಟರ್ ಲಾಕ್ ಕಿತ್ತು ಹೋಗಿದೆ. ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತಗೊಂಡಿದ್ದು, ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿದೆ.ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು, ಮಣ್ಣಿನ ದಿಬ್ಬವಿದ್ದು, ದೇವಸ್ಥಾನ ಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ಅವರು ತಿಳಿಸಿದ್ದಾರೆ.
download (1)
ತಜ್ಞರ ಪರಿಶೀಲನೆ ಬಳಿಕ ಪರಿಹಾರೋಪಾಯ ನಡೆಸಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಈ ನಡುವೆ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟವು ಹೆಚ್ಚಾಗಿದೆ.ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನವು ಅಸ್ತವ್ಯಸ್ತವಾಗಿದೆ.

By Suddi9

Leave a Reply

Your email address will not be published. Required fields are marked *