ಬಂಟ್ವಾಳ:ರಾಜ್ಯಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ಬಂಟ್ವಾಳವಿಧಾನಸಭಾ  ಕ್ಷೇತ್ರದ 39 ಗ್ರಾಮಪಂಚಾಯತ್ ಕಚೇರಿಯ ಮುಂಭಾಗ ಮಂಗಳವಾರ  ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಾಮೂಹಿಕ ಪ್ರತಿಭಟನೆ ನಡೆಯಿತು.    IMG-20201013-WA0069

ಮಾಜಿ ಸಚಿವ  ಬಿ ರಮಾನಾಥ ರೈಯವರ ಮಾರ್ಗದರ್ಶನದಂತೆ  ಈ ಪ್ರತಿಭಟನೆ ನಡೆದಿದ್ದು, ಬಂಟ್ವಾಳ ಬ್ಲಾಕ್ ನ 19ಹಾಗೂ ಪಾಣೆಮಂಗಳೂರು ಬ್ಲಾಕ್ ನ 23 ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ  ಆಯಾಯಾ ಗ್ರಾಮದ ಪಕ್ಷದ ಮಖಂಡರು,ಕಾರ್ಯಕರ್ತರು ಹಾಗೂ ಸರಕಾರದ ಸವಲತ್ತುಗಳ ವಂಚಿತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಗ್ರಾಪಂ ಪಿಡಿಒಗಳ ಮೂಲಕ ಪ್ರತಿಭಟನಾಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಪ್ರತಿಭಟನೆ  ಯಶಸ್ವಿ:

ಬಂಟ್ವಾಳ ಕ್ಷೇತ್ರದ 39 ಗ್ರಾಪಂ ನಲ್ಲು ಪ್ರತಿಭಟನೆ ಯಶಸ್ವಿಯಾಗಿ ನಡೆದಿದೆ.ಈ ಸಂದರ್ಭದಲ್ಲಿ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಿನಿಂದ ವಿಕಲಚೇತನ ಸಹಿತ ವಿವಿಧ ಮಾಶಾಸನ ದೊರಕದೆ ಕಂಗಾಲಾಗಿರುವ  ಫಲಾನುಭವಿಗಳು ಭಾಗವಹಿಸಿ ಗಮನಸೆಳೆದಿದ್ದು,ತಕ್ಷಣ ಈ ಫಲಾನುಭವಿಗಳಿಗೆ ಮಾಶಾಸನವನ್ನು ಒದಗಿಸುವಂತೆ ಪ್ರಮುಖ ಅಂಶವಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಜಿ ಸಚಿವ ರಮಾನಾಥ ರೈ ಅವರು ತಮ್ಮ ಕಳ್ಳಿಗೆ ಗ್ರಾಪಂ.ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು,ಜಿಲ್ಲೆ,ರಾಜ್ಯ ಮಟ್ಟದಲ್ಲು  ಇಂತಹ ಪ್ರತಿಭಟನೆಯನ್ನು ನಡೆಸುವ ನಿಟ್ಟಿನಲ್ಲಿ ಪಕ್ಷ ಚಿಂತನೆ ನಡೆಸುವಂತೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ ಎಂದು ಕುಂದರ್ ತಿಳಿಸಿದ್ದಾರೆ .  ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಜಿಪಂಸದಸ್ಯರಾದ  ಚಂದ್ರಪ್ರಕಾಶ್ ಶೆಟ್ಟಿ,ಎಂ.ಎಸ್.ಮಹಮ್ಮದ್, ಪದ್ಮಶೇಖರಜೈನ್,ಮಂಜುಳಾ ಮಾವೆ ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಕಾಂಗ್ರೆಸ್ ಸದಸ್ಯರು,ಗ್ರಾಪಂ ನ ಮಾಜಿ ಅಧ್ಯಕ್ಷರು,ಸದಸ್ಯರು ವಿವಿದೆಡೆ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *