ಬಂಟ್ವಾಳ:ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ.ನಿ. ಬಿ.ಸಿ.ರೋಡ್ (ಟಿ.ಎ.ಪಿ.ಸಿ.ಎಮ್.ಎಸ್) ಇದರ 2020-2025 ನೇ ಸಾಲಿಗೆ ಸಹಕಾರ ಸಂಘಗಳ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ.ನಿ.ದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರೊಟ್ಟು ಇವರನ್ನು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಭಾಕರ ಪ್ರಭು,ಉಪಾಧ್ಯಕ್ಷ ಸತೀಶ್ ಪೂಜಾರಿ, ನಿರ್ದೇಶಕ ರಾದ ಸಂದೇಶ್ ಶೆಟ್ಟಿ ಪೊಡುಂಬ,ದಿನೇಶ್ ಪೂಜಾರಿ, ಉಮೇಶ್ ಗೌಡ, ಹರೀಶ್ ಆಚಾರ್ಯ ರಾಯಿ,ದೇವರಾಜ್ ಸಾಲಿಯಾನ್,ಜಾರಪ್ಪ ನಾಯ್ಕ,ವೀರಪ್ಪ ಪರವ,ಮಂದಾರತಿ ಎಸ್. ಶೆಟ್ಟಿ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ ಶೆಟ್ಟಿ, ಮುಖ್ಯ ಲೆಕ್ಕಿಗೆ ಮಲ್ಲಿಕಾ,ಸಿಬ್ಬಂದಿ ಗಳಾದ ಯಶೋಧರ ಶೆಟ್ಟಿಗಾರ್, ಜೈಸನ್,ಶಶಿಧರ ನಾಯ್ಕ ಉಪಸ್ಥಿತರಿದ್ದರು.
