ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಕಳೆದ ಐದು ವರ್ಷಗಳಿಂದ ಚಾಲಕರಾಗಿದ್ದ ಮಲ್ಲೇಶ್ ಬಡಿಗೆರೆ ಅವರು ಮಂಗಳೂರು ಕಾನೂನು ಹಿರಿಯ ಅಧಿಕಾರಿ ಕಚೇರಿಗೆ ಹಾಗೂ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಲ್ಲಿ ಪಿ.ಸಿ.ಯಾಗಿ ಕರ್ತವ್ಯ ನಿರ್ವಹಿಸಿದ ಶರೀಫ್ ಇದೀಗ ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮ.

ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಲ್ಲಿ ಟ್ರಾಫಿಕ್ ಎಸ್.ಐ.ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಇದೇ ಸಂದರ್ಭದಲ್ಲಿ ತೆರವಾದ ಚಾಲಕನ ಸ್ಥಾನಕ್ಕೆ ಚಾಲಕನ ಆಗಮಿಸಿದ ಚಂದ್ರ ನಾಯ್ಕ್ ಅವರಿಗೆ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎ.ಎಸ್.ಐ.ಬಾಲಕೃಷ್ಣ ಉಪಸ್ಥಿತರಿದ್ದರು.
