ಪೊಳಲಿ : ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದಿದ್ದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಹಳೆಯ ರಿವಾಜಿನಂತೆ ಬಿಲ್ಲವ ಸಮುದಾಯವು ಸೇವಾರೂಪದಲ್ಲಿ ಕೊಡುಗೆಯಾಗಿ ಒದಗಿಸಿದ ಧ್ವಜಸ್ತಂಭದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಗೇಡಿಗಳು ಇಲ್ಲಸಲ್ಲದ `ವಿರೂಪ ಚಿತ್ರ’ ವೈರಲ್ ಮಾಡಿದ್ದಾರೆ.

bc65ea0e-a247-4a6f-93b9-c2c020624f66

ಹಲವು ಸುದ್ದಿ ಮಾಧ್ಯಮದ ಮಿತ್ರರು ಸ್ಥಳೀಯ ಮಾಧ್ಯಮ ವರದಿಗಾರಲ್ಲಿ ಕಾಲ್ ಮಾಡಿ ವಿಚಾರಿಸಿದ್ದರು.

ಪೊಳಲಿ ಧ್ವಜಸ್ತಂಭ ಮಧ್ಯಭಾಗದಲ್ಲಿ ಮುರಿದಿರುವ ಚಿತ್ರ ವಾಟ್ಸಾಪ್ ಸಹಿತ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಸಂಪೂರ್ಣವಾಗಿ ಎಡಿಟ್(ಮೋರ್ಪಿಂಗ್) ಮಾಡಲಾದ ಚಿತ್ರವಾಗಿದ್ದು, ಶ್ರೀ ಕ್ಷೇತ್ರ ಪೊಳಲಿ ದೇವರ ದಯೆಯಿಂದ ಧ್ವಜಸ್ತಂಭಕ್ಕೇನೂ ಆಗಿಲ್ಲ. ಆದ್ದರಿಂದ ಸತ್ಯವೆಂದು ಬಿಂಬಿಸುವಂತಹ ಇಂತಹ ಚಿತ್ರ-ವದಂತಿಗಳಿಗೆ ಸಾರ್ವಜನಿಕರು, ಭಕ್ತಜನರು ಕಿವಿಗೊಡಬಾರದು ಎಂಬುದು ನಿತ್ಯ ದೇವಸ್ಥಾನಕ್ಕೆ ಭೇಟಿ ಕೊಡುವ ಶ್ರೀ ಕ್ಷೇತ್ರದ ಭಕ್ತರ ಅಭಿಪ್ರಯಾವಾಗಿದೆ.57eeacfc-10b9-4ea8-9d95-293db6f2e345

By suddi9

Leave a Reply

Your email address will not be published. Required fields are marked *