ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಚ್ಚಿನಡ್ಕ ಎಂಬಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಂಗಳೂರು ವಿಭಾಗದಿಂದ15ನೇ ಹಣಕಾಸು ಕ್ರೀಯಾ ಯೋಜನೆಯಡಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಇವರ 5 ಲಕ್ಷ ಅನುದಾನದಿಂದ ನಿರ್ಮಾಣಗೊಳ್ಳುವ ನೀರಿನ ಟ್ಯಾಂಕ್ ನ ಗುದ್ದಲಿ ಪೂಜೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಡಿ,ವಲಯ ಅಧ್ಯಕ್ಷ ವಿಜಯ್ ಡಿ’ಸೋಜ, ಪಂಚಾಯತ್ ನಿಕಟಪೂರ್ವ ಸದಸ್ಯರಾದ ರಮೇಶ್ ಪಚ್ಚಿನಡ್ಕ,ಜಗದೀಶ್ ಕಂಜೆತ್ತೂರು, ದಿವಾಕರ ಪಂಬದೆಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. 
