ಬಂಟ್ವಾಳ : 15 ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ 5 ಲಕ್ಷ ವರೆಗಿನ ಅನುದಾನದ ಎಲ್ಲಾ ವಿಧದ ಕಾಮಗಾರಿಗಳು ಶೀಘ್ರವಾಗಿ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ತುಂಡು ಗುತ್ತಿಗೆಯ ಮೂಲಕ ನಿರ್ವಹಿಸಲು ಸರಕಾರದ ಅದೇಶ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರಿಗೆ ಮನವಿ ಮಾಡಿದ್ದಾರೆ.FB_IMG_1587638950287

ರಾಜ್ಯದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ  ಅನುಷ್ಠಾನ ಗೊಳ್ಳುತ್ತಿರುವ ಶಾಸಕರ,ಲೋಕಸಭಾ ಸದಸ್ಯರ,ಜಿಪಂ, ತಾ.ಪಂ., ಗ್ರಾಮ ಪಂಚಾಯತ್ ಗಳಲ್ಲಿನ  ವಿವಿಧ ಯೋಜನೆಗಳಲ್ಲಿ  5 ಲಕ್ಷ ರೂ. ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ  ಕರಾರಿನಂತೆ  ನಿರ್ವಹಿಸಲಾಗುತ್ತಿದ್ದು , ಜಿಪಂ. ,ತಾ.ಪಂ.,     ಗ್ರಾ ಪಂ.ಗಳಲ್ಲಿ  ಸಣ್ಣ ಮೊತ್ತದ ಕಾಮಗಾರಿ ಗಳು ತುಂಡು ಗುತ್ತಿಗೆ ಆಧಾರದಲ್ಲಿ ನಿರ್ವಹಿಸುವ ಮೂಲಕ ಶೀಘ್ರವಾಗಿ ಪ್ರಗತಿ ಕಾಣಲು ಸಾದ್ಯವಾಗುತ್ತಿತ್ತು. ಕಳೆದ ಬಾರಿ ಸರಕಾರವು ತುಂಡು ಗುತ್ತಿಗೆಯನ್ನು ರದ್ದು ಪಡಿಸಿತ್ತು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಮತ್ತು ತಾವು ಸರಕಾರಕ್ಕೆ ಒತ್ತಡ ತಂದ ಹಿನ್ನಲೆಯಲ್ಲಿ  ಸರಕಾರ ಈ ಸಂಬಂಧಿಸಿದ ಅದೇಶವನ್ನು ಹಿಂಪಡೆದು  2020ರ ಜು.17 ರವರೆಗೆ  ತುಂಡು ಗುತ್ತಿಗೆ ಮುಂದುವರಿಸುವ ಅದೇಶ ಹೊರಡಿಸಲಾಗಿತ್ತು ಎಂದು ಪ್ರಭು ಮನವಿಯಲ್ಲಿ ವಿವರಿಸಿದ್ದಾರೆ.ಆದರೆ ಈ ಅದೇಶ ಬರುವ ಹೊತ್ತಿಗೆ ಕೊರೊನಾ ಮಹಾಮಾರಿಯಿಂದಾಗಿ ಕಳೆದ ಮಾರ್ಚ್ ನಿಂದ ಈವರೆಗೂ ತುಂಡು ಗುತ್ತಿಗೆ ಸಂಬಂಧಿಸಿದ  ಕಾಮಗಾರಿ  ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ

ಜಿಪಂ., ತಾ.ಪಂ.,ಗ್ರಾಪಂ.ಗಳ 15 ನೇ ಹಣಕಾಸು ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಕಾಮಗಾರಿ ಶೀಘ್ರವಾಗಿ ಅನುಷ್ಠಾನಗೊಳ್ಳುವ ದೆಸೆಯಲ್ಲಿ 5  ಲಕ್ಷ ರೂ. ವರೆಗಿನ  ಎಲ್ಲಾ ವಿಧದ ಕಾಮಗಾರಿಗಳನ್ನು ತುಂಡು ಗುತ್ತಿಗೆಯ ಮೂಲಕ ನಿರ್ವಹಿಸಲು ಸರಕಾರದಿಂದ ಅದೇಶ ಹೊರಡಿಸುವ ನಿಟ್ಟಿನಲ್ಲಿ  ಸರಕಾರಕ್ಕೆ ಮತ್ತೊಮ್ಮೆ ಒತ್ತಡ ಹೇರುವಂತೆ ಶಾಸಕ ರಾಜೇಶ್ ನಾಯ್ಕ್ ಅವರಲ್ಲಿ ಪ್ರಭು ಮನವಿ ಮಾಡಿದ್ದಾರೆ.

By Suddi9

Leave a Reply

Your email address will not be published. Required fields are marked *