ಬಂಟ್ವಾಳ: ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಕಾಳಜಿ ಸಹಿತ ಹಲವು ಆರ್ಥಿಕ ಚಟುವಟಿಕೆಗಳಿಗೆ ನೆರವು ನೀಡುವ ಯೋಜನೆಗಳೊಂದಿಗೆ ಪಾಣೆಮಂಗಳೂರಿಗೆ ಸಮೀಪದ ಮೇಲ್ಕಾರ್ ನ ಎಂ.ಎಚ್. ಹೈಟ್ಸ್ ನ ಮೊದಲ ಮಹಡಿಯಲ್ಲಿ “ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ”.ಶುಕ್ರವಾರ ಶುಭಾರಂಭಗೊಂಡಿತು. 
ಸಂಘದ ಕಚೇರಿಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ದೀಪಪ್ರಜ್ವಲನಗೈದು ಉದ್ಘಾಟಿಸಿದರು,ಹಿರಿಯರ,ಅನುಭವಿಗಳ ಮಾರ್ಗದರ್ಶನದಲ್ಲಿ ಸಂಘ ಮುನ್ನಡೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ,ಒಳ್ಳೆಯ ಸದುದ್ದೇಶದಿಂದ ಆರಂಭವಾದ ಸಂಘವು ಎಲ್ಲಾ ವರ್ಗದ ಜನರಿಗೆ ಆಸರೆಯಾಗಲಿ ಎಂದರು.
ಮಾಜಿ ಸಚಿವ ರಮಾನಾಥ ರೈ ಗಣಕಯಂತ್ರದ ಉದ್ಘಾಟಿಸಿ ಮಾತನಾಡಿ,ಭವಿಷ್ಯದ ಗುರಿಯನ್ನಿರಿಸಿಕೊಂಡು ಸಂಘ ಮುನ್ನಡೆದರೆ ಯಶಸ್ಸು ಖಚಿತಎಂದರು. ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಸಹಕಾರಿ ಸಂಘದ ಬಂಟ್ವಾಳ ವ್ಯಾಪ್ತಿಯ ಅಧಿಕಾರಿ ಸುಕನ್ಯಾ, ಕಟ್ಟಡದ ಮಾಲಕ ಮಹಮ್ಮದ್ ಇಕ್ಬಾಲ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಘದ ಮುಖ್ಯ ಪ್ರವರ್ತಕ ಕೈಯೂರು ನಾರಾಯಣ ಭಟ್ ಸಂಘದ ಧ್ಯೇಯೋದ್ದೇಶವನ್ನು ವಿವರಿಸಿ,ಸ್ವಾಗತಿಸಿದರು. ಸಹಪ್ರವರ್ತಕರಾದ ಜಯರಾಮ ಪೂಜಾರಿ, ಮುರಳೀಧರ ರಾವ್, ಕೆಯ್ಯೂರು ಈಶ್ವರ ಭಟ್, ವೇದಮೂರ್ತಿ ಸುದರ್ಶನ ಮಯ್ಯ ಕೊಳಕೆ,ವೇದವ್ಯಾಸ ರಾಮಕುಂಜ,ಪಿ.ಜಯರಾಮ ಶೇಖ,ಅನಂತಪ್ರಭು,ರಮಾ.ಎಸ್.ಭಂಡಾರಿ, ಪ್ರವೀಣ್ ಚಂದ್ರ,ಅನಿಲ್ ಕುಮಾರ್ ಉಪಸ್ಥಿತರಿದ್ದರು. ಸಹಪ್ರವರ್ತಕರಾದ ಜಯಾನಂದ ಪೆರಾಜೆ ವಂದಿಸಿದರು.ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
