ಬಂಟ್ವಾಳ:ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಉಳುವವನೇ ಹೊಲದೊಡೆಯ ಎಂಬ ಮಾತಿನಂತೆ ಭೂಸುಧಾರಣಾ ಕಾನೂನನ್ನು ರಾಜ್ಯದಲ್ಲಿ ಜಾರಿ ಮಾಡಿ ಬಡವರ ಪಾಲಿಗೆ ದೇವ ಮಾನವನಂತಾಗಿದ್ದರೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ದೇಶದ ಯುವ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡಿ ಜಗತ್ತಿನ ಎಲ್ಲಾ ದೇಶಗಳಿಗೆ ಸರಿಸಮಾನವಾಗಿ ಪೈಪೋಟಿ ನೀಡಲು ಶಕ್ತಿ ತುಂಬಿದ್ದರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಎರಡು ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಮುಖ್ಯ ಮಂತ್ರಿ ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಪ್ರಸ್ತಾವನೆ ಗೈದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಚಂದ್ರಪ್ರಕಾಶ್ ಶೆಟ್ಟಿ,ಅಕ್ರಮ ಸಕ್ರಮ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್,ರವಿ ಪೂಜಾರಿ ಪಂಜಿಕಲ್ಲು, ಸುರೇಶ್ ಪೂಜಾರಿ ಜೊರ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ಪುರಸಭಾ ಸದಸ್ಯರಾದ ವಾಸುಪೂಜಾರಿ, ಗಂಗಾಧರ್ ಪೂಜಾರಿ,ಲುಕ್ಮಾನ್, ಲೋಲಾಕ್ಷ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಪ್ರಮುಖರಾದ ಜಗನ್ನಾಥ ತುಂಬೆ,ಸುವರ್ಣ ಕುಮಾರ್ ಜೈನ್,ಗಂಗಯ್ಯ ಡಿ .ಎನ್ ಇರ್ವತೂರು,ವಿನ್ಸೆಂಟ್ ಪಿಂಟೋ ಸರಪಾಡಿ,ವೆಂಕಪ್ಪ ಪೂಜಾರಿ,ಫಾರೂಖ್ ನಾವೂರು, , ಮದುಸೂಧನ್ ಶೆಣೈ,ಬಂಟ್ವಾಳ ಸುಭಾಷ್ ಚಂದ್ರ ಶೆಟ್ಟಿ, ಐಡಾ ಸುರೇಶ್, ಮೊಹಮ್ಮದ್ ನಂದಾವರ, ಚಿತ್ತರಂಜನ್ ಶೆಟ್ಟಿ,ಮಲ್ಲಿಕಾ ಪಕಳ ಅಮ್ಮು ಅರಬಿಗುಡ್ಡೆ,ಪುಷ್ಪರಾಜ್ ನಾವೂರು,ಸಂತೋಷ್ ಪೂಜಾರಿ ಪಂಜಿಕಲ್ಲು, ಏ.ಜೆ. ಮೊರಸ್ ಅಲ್ಲಿಪಾದೆ,ಪದ್ಮನಾಭ ಸಾವಂತ್, ಪೂವಪ್ಪ ಪೂಜಾರಿ ಮೊದಲಾದವರಿದ್ದರು. ಮಹಾಬಲ ಬಂಗೇರ ಸ್ವಾಗತಿಸಿ, ರಮೇಶ್ ನಾಯಕ್ ರಾಯಿ ವಂದಿಸಿದರು.,
