ಗುರುಪುರ : ಗುರುಪುರ ಶ್ರೀಶಕ್ತಿ-ಸ್ವಸಹಾಯ ಗುಂಪಿನ ಸಮನ್ವಯ ಸಮಿತಿಯು ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷರಿಗೆ ಶನಿವಾರ ಅಲೈಗುಡ್ಡೆಯ ಅಂಗನವಾಡಿಯಲ್ಲಿ ಗೌರವ ಸಲ್ಲಿಸಿತು.ಗುರುಪುರ ಗ್ರಾಪಂನ ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಪಂಚಾಯತ್‍ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆ ಮೂಳೂರು ಎರಡನೇ ವಾರ್ಡಿ ಸದಸ್ಯರೂ ಆಗಿದ್ದ ಉಪಾಧ್ಯಕ್ಷ ಉದಯ ಭಟ್‍ಗೆ ಸಲ್ಲುತ್ತದೆ.

gur-aug-8-gauravaಗ್ರಾಮವಾಸಿಗಳು ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದ್ದಾರೆ ಎಂದು ಸಮನ್ವಯ ಸಮಿತಿ ಅಧ್ಯಕ್ಷೆ ಕುಸುಮಾ ಮೆಚ್ಚುಗೆ ವ್ಯಕ್ತಪಡಿಸಿದರು.ಗೌರವಕ್ಕೆ ಉತ್ತರವಾಗಿ ಭಟ್ ಮಾತನಾಡಿ, ಗ್ರಾಮದ ಅಭಿವೃದ್ಧಿ ಹಾಗೂ ಬಡವರ ಕಷ್ಟಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೇನೆಂಬ ಸಮಾಧಾನ ತನಗಿದೆ ಎನ್ನುತ್ತ, ಸಣ್ಣ ಕೈಗಾರಿಕೆ ಇಲಾಖೆಯಲ್ಲಿ ಗ್ರಾಮೀಣರಿಗೆ ಲಭ್ಯವಿರುವ ಸ್ವ-ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಹಿಳಾ ಮಂಡಳಿ ಅಧ್ಯಕ್ಷೆ ವಿನೋದಾ ಡಿ ಅಂಚನ್, ಸಮನ್ವಯ ಸಮಿತಿಯ ಸದಸ್ಯ ಕಮಲಾಕ್ಷ ಅಂಚನ್, ಆಶಾ ಕಾರ್ಯಕರ್ತೆ ಶೀಲಾಕ್ಷಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸುಜಾತಾ ಸ್ವಾಗತಿಸಿ ನಿರೂಪಿಸಿದರು. ಜ್ಯೋತಿ ಹೆಗ್ಡೆ ವಂದಿಸಿದರು.

By Suddi9

Leave a Reply

Your email address will not be published. Required fields are marked *