ಕೈಕಂಬ:ಬಡಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2.5 ಕೋಟಿ ರೂ. ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಫೆ.15ರಂದು ಶನಿವಾರ ಚಾಲನೆ ನೀಡಿದರು.
ಬಡಗಬೆಳ್ಳೂರು ಗ್ರಾಮದದೂಪೆಮಾರು ರಸ್ತೆ ಅಭಿವೃದ್ಧಿಗೆ 15 ಲಕ್ಷ ರೂಪಾಯಿ, ಬಡಗಬೆಳ್ಳೂರು ದೂಪೆಮಾರು ರಸ್ತೆ ಅಭಿವೃದ್ಧಿಎ 15 ಲಕ್ಷ ರೂಪಾಯಿ, ಅಂಬೋಡಿಮಾರು ರಸ್ತೆ ಕಾಂಕ್ರೀಟುಕರಣಕ್ಕೆ 10 ಲಕ್ಷ ರೂಪಾಯಿ, ನೆಲ್ಲಿಮಾರು ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂಪಾಯಿ, ಬಟ್ಟಾಜೆ ರಸ್ತೆ ಅಭಿವೃದ್ಧಿಗೆ 5 ಲಕ್ಷ ರೂಪಾಯಿ ಹಾಗೂ ತೆಂಕ ಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಾಗುಡ್ಡೆ ರಸ್ತೆ ಅಭಿವೃದ್ಧಿಗೆ 1.5 ಕೋಟಿ, ತೆಂಕಬೆಳ್ಳೂರು ಗ್ರಾಮದ ಕೆಳಗಿನ ಕಮ್ಮಾಜೆ ನಾಗಬನದವರೆಗೆ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ, ಶ್ರೀ ಕಾವೇಶ್ವರ ದೇವಸ್ಥಾನದ ಬಳಿ ತಡೆಗೋಡೆ ರಚನೆಗೆ 5 ಲಕ್ಷ ರೂಪಾಯಿ,ಅನುದಾನದಲ್ಲಿ ಕಾಮಗಾರಿಗಳು ನಡೆಯಲಿದ್ದು ಚಾಲನೆ ನೀಡಲಾಯಿತು.

ಕಾಮಗಾರಿ ಉದ್ಘಾಟನೆ:
ಬಡಗಬೆಳ್ಳೂರು ಗ್ರಾಮದ ಗುಡ್ಡೆಯಂಗಡಿ ಕೋಡಿ ಮಜಲು ರಸ್ತೆಗೆ 10 ಲಕ್ಷ, ಕೇಪ್ಲಾಡ್ಕ ರಸ್ತೆಗೆ 5 ಲಕ್ಷ, ತೆಂಕಬೆಳ್ಳೂರು ಗ್ರಾಮದದಲ್ಲಿ 10ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕಾಗುಡ್ಡೆ ರಸ್ತೆಯನ್ನು ಉದ್ಘಾಟಿಸಲಾಯಿತು.
ಬಳಿಕ ಮಾತನಾಡಿದ ಅವರು, ಬಂಟ್ವಾಳ ತಾಲೂಕು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳು ನಡೆಯುತ್ತಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದೆ. ಕಾವೇಶ್ವರ ದೇವಸ್ಥಾನದ ರಥಬೀದಿಗೆ ರಸ್ತೆ ಕಾಮಗಾರಿಗೆ ಪ್ರವಾಸಿ ಇಲಾಖೆ ಅಥವಾ ಧಾರ್ಮಿಕ ಧತ್ತಿ ಇಲಾಖೆಯಿಂದ ಮಾಡಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಯಶವಂತ ಪೂಜಾರಿ ಪೊಳಲಿ, ಬಂಟ್ವಾಳ ಮಂಡಲ ಬಿಜೆಪಿ ಉಪಾಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ, ನಂದಪ್ಪ ರೈ, ರಮೇಶ್ ಬಟ್ಟಾಜೆ,ಪ್ರಕಾಶ್ ಆಳ್ವ,ಉಮೇಶ್ ಶೆಟ್ಟಿ ಪರಿಮೊಗರು,ಬಡಗಬೆಳ್ಳೂರು ಬೂತ್ ಬಿಜೆಪಿ ಅಧ್ಯಕ್ಷ ರತ್ನಕಾರ ಪೂಜಾರಿ, ಕಾರ್ಯದರ್ಶಿ ವಿಠಲ ಪೂಜಾರಿ, ಸವಿತಾ ಎನ್ ಶೆಟ್ಟಿ, ವೀಣಾ ಭಟ್ ,ಗಂಗಾಧರ ರೈ, ತಿರುಲೇಶ್ ,ಸಾಕೇತ್ ಶೆಟ್ಟಿಸಂದೀಪ್, ತಿಮ್ಮಪ್ಪ ,ನಿರಂಜನ ಶೆಟ್ಟಿ , ಶ್ರೀನಿವಾಸ , ಸುಧೀರ್ ಪೂಂಜ,ಕಾರ್ತಿಕ್ ಬಲ್ಲಾಳ್,ಇಂಜೀನೀಯರ್ಗಳಾದ ಅರುಣುಪ್ರಕಾಶ್ ಹಾಗೂ ಅಜಿತ್ ಗುತ್ತಿಗೆದಾರ ಯಶೋಧರ ಕಲ್ಕುಟಉಪಸ್ಥಿತರಿದ್ದರು.

