ಮಂಗಳೂರು:ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಾಗರಿಕರು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟವು ಹಮ್ಮಿಕೊಂಡಿರುವ ‘ನದಿ ಸಂರಕ್ಷಣಾ ಅಭಿಯಾನ 2020’ ಇದರ ಭಾಗವಾಗಿ ನದಿ ಪರಿಸರದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು ರೋಶನಿ ನಿಲಯದ ವಿದ್ಯಾರ್ಥಿಗಳೊಂದಿಗೆ ನದಿ ದಂಡೆಯಾತ್ರೆ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನದಿ ತೀರದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದರೊಂದಿಗೆ ಪರಿಸರ ರಕ್ಷಣೆಗೆ ಪೂರಕವಾದ ಹಾಡುಗಳು, ಘೋಷಣೆ ಸ್ಥಳೀಯ ಹಿರಿಯರಿಂದ ಮಾಹಿತಿ, ಸಲಹೆಗಳನ್ನು ಪಡೆಯುತ್ತಾ, ನದಿ ತಟದ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಿತು.ಒಟ್ಟಿನಲ್ಲಿ ದಂಡೆಯಲ್ಲಿ ಸಂಚರಿಸುವ ಮೂಲಕ ನದಿ ನಾಶದ ಗಂಭೀರ ದುಷ್ಪರಿಣಾಮ ಮೇಲೆ ಅಧ್ಯಯನ ನಡೆಸಲಾಯಿತು.ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಂಡ ಕಾರ್ಯಕ್ರಮ ಸಂಜೆ 5 ಗಂಟೆಯ ತನಕ ಅವಲೋಕನ ಸಭೆಯ ಮೂಲಕ ಕೊನೆಗೊಂಡಿತು.ಕಾರ್ಯಕ್ರಮದ ಆರಂಭದಲ್ಲಿ ಮಾರ್ಗತಲೆ ನದಿ ಪರಿಸರದಲ್ಲಿ ಸೇರಿಕೊಂಡರುಶ್ರೀಮತಿ ರಜಿಯಾ ಇಬ್ರಾಹಿಂ ಮಾಜಿ ಉಪಾಧ್ಯಕ್ಷೆ ಉಳ್ಳಾಲ ನಗರಸಭೆ ಇವರು ಚಾಲನೆ ನೀಡಿದರು.ಶ್ರೀ ರಿಚಾರ್ಡ್ ಡಿಸೋಜ ಪ್ರಾರ್ಥನೆ ಸಲ್ಲಿಸಿದರು,ಶ್ರೀ ಅಬ್ದುಲ್ ಖಾದರ್ ಯು.ಕೆ. ಶುಭ ಹಾರೈಸಿದರು.ಸ್ವಾಗತ ಮತ್ತು ಧನ್ಯವಾದ ಅರ್ಪಣೆ ಶ್ರೀ ಮಂಗಳೂರು ರಿಯಾಝ್ ಸಂಚಾಲಕರು ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಉಳ್ಳಾಲ.
